Vijay Prakash: ಕೇದಾರನಾಥ ದೇವಾಲಯದಲ್ಲಿ ‘ಓಂ ಶಿವೋಂ..’ ಹಾಡಿಗೆ ಧ್ವನಿಯಾದ ಗಾಯಕ ವಿಜಯ್​ ಪ್ರಕಾಶ್​

Updated on: Jun 10, 2023 | 2:04 PM

ಕುಟುಂಬ ಸಮೇತರಾಗಿ ವಿಜಯ್​ ಪ್ರಕಾಶ್​ ಅವರು ಕೇದಾರನಾಥದಲ್ಲಿ ದೇವರ ದರ್ಶನ ಪಡೆದಿದ್ದಾರೆ. ಉತ್ತರಖಂಡದಲ್ಲಿರುವ ಈ ದೇವಾಲಯದಲ್ಲಿ ‘ಓಂ ಶಿವೋಂ..’ ಹಾಡಿನ ಮೂಲಕ ಪ್ರತಿನಿತ್ಯ ಪೂಜೆ ನಡೆಯುತ್ತದೆ.

ಜನಪ್ರಿಯ ಹಿನ್ನೆಲೆ ಗಾಯಕ ವಿಜಯ್​ ಪ್ರಕಾಶ್​ (Vijay Prakash) ಅವರು ಸಾಕಷ್ಟು ಬ್ಯುಸಿ ಆಗಿದ್ದಾರೆ. ಅವರು ನೀಡಿದ ಸೂಪರ್​ ಹಿಟ್​ ಹಾಡುಗಳು ಅನೇಕ. ಅವರಿಗೆ ಅಧ್ಯಾತ್ಮದ ಕಡೆಗೂ ಸಖತ್​ ಒಲವು ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಅವರೀಗ ಕೇದಾರನಾಥ ದೇವಾಲಯಕ್ಕೆ (Kedarnath temple) ಭೇಟಿ ನೀಡಿದ್ದಾರೆ. ಅಲ್ಲಿ ದೇವರ ಹಾಡು ಹೇಳುವ ಮೂಲಕ ಭಕ್ತಿ ಮೆರೆದಿದ್ದಾರೆ. ಕುಟುಂಬ ಸಮೇತರಾಗಿ ವಿಜಯ್​ ಪ್ರಕಾಶ್​ ಅವರು ಕೇದಾರನಾಥದಲ್ಲಿ ದೇವರ ದರ್ಶನ ಪಡೆದಿದ್ದಾರೆ. ಉತ್ತರಖಂಡದಲ್ಲಿರುವ ಈ ದೇವಾಲಯದಲ್ಲಿ ‘ಓಂ ಶಿವೋಂ..’ ಹಾಡಿನ ಮೂಲಕ ಪ್ರತಿನಿತ್ಯ ಪೂಜೆ ನಡೆಯುತ್ತದೆ. ವಿಜಯ್​ ಪ್ರಕಾಶ್​ ಕೂಡ ದೇವರ ಸನ್ನಿಧಿಯಲ್ಲಿ ‘ಓಂ ಶಿವೋಂ..’ (Om Shivoham) ಗೀತೆ ಹಾಡುವ ಮೂಲಕ ಪೂಜೆ ಸಲ್ಲಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More