ಕೊಲ್ಲೂರು ಮೂಕಾಂಬಿಕಾ ಪ್ರಸಾದವನ್ನು ಜೈಲಿಗೆ ತಂದು ಪತಿ ದರ್ಶನ್ಗೆ ನೀಡಿದ ವಿಜಯಲಕ್ಷ್ಮೀ
ವಿಜಯಲಕ್ಷ್ಮಿ ಅವರು ಮೂಕಾಂಬಿಕಾ ದೇವಿಯ ಎದುರು ವಿಶೇಷ ಪೂಜೆ ಮಾಡಿಸಿದ್ದರು. ಅಲ್ಲದೆ ನವ ಚಂಡಿಕಾ ಹೋಮವನ್ನು ಕೂಡ ಮಾಡಿಸಲಾಗಿತ್ತು. ಈಗ ವಿಜಯಲಕ್ಷ್ಮೀ ಬೆಂಗಳೂರಿಗೆ ಮರಳಿದ್ದಾರೆ. ಪೂಜೆಯ ಸಂದರ್ಭದಲ್ಲಿ ತೆಗೆದುಕೊಂಡು ಬಂದ ಪ್ರಸಾದವನ್ನು ಜೈಲಿಗೆ ತಂದಿದ್ದಾರೆ ವಿಜಯಲಕ್ಷ್ಮೀ.
ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಕೊಲ್ಲೂರಿಗೆ ತೆರಳಿದ್ದರು. ಮೂಕಾಂಬಿಕಾ ದೇವಿಯ ಎದುರು ವಿಶೇಷ ಪೂಜೆಯನ್ನು ಅವರು ಮಾಡಿಸಿದ್ದರು. ಅಲ್ಲದೆ ನವ ಚಂಡಿಕಾ ಹೋಮವನ್ನು ಕೂಡ ಮಾಡಿಸಲಾಗಿತ್ತು. ಈಗ ವಿಜಯಲಕ್ಷ್ಮೀ ಬೆಂಗಳೂರಿಗೆ ಮರಳಿದ್ದಾರೆ. ಪೂಜೆಯ ಸಂದರ್ಭದಲ್ಲಿ ತೆಗೆದುಕೊಂಡು ಬಂದ ಪ್ರಸಾದವನ್ನು ಜೈಲಿಗೆ ತಂದಿದ್ದಾರೆ ವಿಜಯಲಕ್ಷ್ಮೀ. ಅಲ್ಲಿ ದರ್ಶನ್ಗೆ ಅವರು ನೀಡಿದ್ದಾರೆ. ದರ್ಶನ್ ಅವರು ಜೈಲು ಸೇರಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಇದು ಅವರನ್ನು ಬಹುವಾಗಿ ಕಾಡಿದೆ. ದರ್ಶನ್ ಅವರು ಹೊರಗೆ ಬರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕೇಸ್ ತುಂಬಾನೇ ಗಂಭೀರ ಆಗಿದೆ. ಎಲ್ಲರ ಕಣ್ಣು ಈ ಕೇಸ್ಮೇಲೆ ಇದೆ. ಅಲ್ಲದೆ, ಇನ್ನು ಈ ಕೇಸ್ನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಆಗಿಲ್ಲ. ಈ ಎಲ್ಲಾ ಕಾರಣದಿಂದ ಅವರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಪೊಲೀಸರು ಕೋರ್ಟ್ ಎದುರು ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.