ವಿಜಯನಗರ: ಮೈಲಾರ ಕಾರ್ಣಿಕ ವಿಚಾರವಾಗಿ ಕಾರ್ಣಿಕ ಗೊರವಯ್ಯ ಮತ್ತು ಧರ್ಮದರ್ಶಿ ವೆಂಕಪ್ಪಯ್ಯ ನಡುವೆ ಜಟಾಪಟಿ

ವಿಜಯನಗರ: ಮೈಲಾರ ಕಾರ್ಣಿಕ ವಿಚಾರವಾಗಿ ಕಾರ್ಣಿಕ ಗೊರವಯ್ಯ ಮತ್ತು ಧರ್ಮದರ್ಶಿ ವೆಂಕಪ್ಪಯ್ಯ ನಡುವೆ ಜಟಾಪಟಿ

ವಿವೇಕ ಬಿರಾದಾರ
|

Updated on: Mar 04, 2024 | 12:42 PM

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಡೆಂಕನ ಮರಡಿಯಲ್ಲಿನ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ‘ಸಂಪಾದಿತಲೇ ಪರಾಕ್’ ಎಂದು ಕಾರ್ಣಿಕ ನುಡಿದಿದ್ದಾರೆ. ಈ ಕಾರ್ಣಿಕದ ಬಗ್ಗೆ ಮೈಲಾರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಪಸ್ವರ ಎತ್ತಿದ್ದಾರೆ.

ವಿಜಯನಗರ (Vijayanagar) ಜಿಲ್ಲೆಯ ಹೂವಿನ ಹಡಗಲಿ (Huvinahadagali) ತಾಲೂಕಿನ ಡೆಂಕನ ಮರಡಿಯಲ್ಲಿನ ಶ್ರೀಮೈಲಾರಲಿಂಗೇಶ್ವರ (Mylara Lingeshwara) ಕಾರ್ಣಿಕೋತ್ಸವ (Karnika) ರಾಜ್ಯದಲ್ಲೇ ಪ್ರಸಿದ್ದಿ ಪಡೆದಿದೆ. ಈ ಬಾರಿಯ ಕಾರ್ಣಿಕವನ್ನು ಫೆ.26 ರಂದು ಗೊರವಯ್ಯ (Gorvayya) ನುಡಿದಿದ್ದಾರೆ. ಅದು ‘ಸಂಪಾದಿತಲೇ ಪರಾಕ್’ ಎಂದು ಕಾರ್ಣಿಕ ನುಡಿಯಲಾಗಿದೆ. ಈ ಕಾರ್ಣಿಕದ ಬಗ್ಗೆ ಮೈಲಾರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಪಸ್ವರ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೆಂಕಪ್ಪಯ್ಯ ಒಡೆಯರ್ ವಿರುದ್ಧ ಕಾರ್ಣಿಕ ಗೊರವಯ್ಯ ದೂರು ನೀಡಲು ಮುಂದಾಗಿದ್ದಾರೆ. ಧರ್ಮದರ್ಶಿ ಎಂದೇಳಿಕೊಂಡು ವೆಂಕಪ್ಪಯ್ಯ ದೇವಸ್ಥಾನ ವಾತಾವರಣ ಹಾಳು ಮಾಡಿದ್ದಾರೆ. ಕಾಲಿಗೆ ಬೀಳಲಿಲ್ಲ, ಗುಲಾಮನಾಗಲಿಲ್ಲ ಎಂದು ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ನನ್ನ ಕುಟುಂಬದ ವಿರುದ್ಧ ನಿರಂತರವಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಎಂಟು ವರ್ಷದಿಂದ ನನ್ನನ್ನು ನ್ಯಾಯಾಲಯಕ್ಕೆ ಅಲೆದಾಡಿಸಿದ್ದಾರೆ. ಸುಳ್ಳು ವೆಂಕಪ್ಪ ಎಂದೇ ಹೆಸರಾಗಿದ್ದಾರೆ. ಮೈಲಾರದ ಕಾರ್ಣಿಕಕ್ಕೆ ಅಪಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವೆಂಕಪ್ಪಯ್ಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ ಎಂದುಕಾರ್ಣಿಕದ ಗೊರವಯ್ಯ ರಾಮಪ್ಪ ಹೇಳಿದರು.

ಮೈಲಾರ ದೇವರು ಹೇಳಿದ ವಾಕ್ಯ ನಾನು ಹೇಳುತ್ತೇನೆ. ಕಟ್ಟು ನಿಟ್ಟಿನ ಪೂಜೆ ಮಾಡಿ ಉಪವಾಸ ಇದ್ದು ಕಾರ್ಣಿಕ ಹೇಳುತ್ತೇನೆ. ವೆಂಕಪ್ಪಯ್ಯನೇ ಕಾರ್ಣಿಕ ಹೇಳಲಿ ನೋಡೋಣ. ಸುಖಾಸುಮ್ಮನೆ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು‌ ಕಾರ್ಣಿಕವನ್ನು ಅವರ ವಿರುದ್ಧ ಹೇಳುತ್ತಿದ್ದೇನೆ ಎಂದು ಭಕ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ