ಧಾರಾಕಾರ ಮಳೆಗೆ ಬಸ್ ನಿಲ್ದಾಣ ಜಲಾವೃತ: ಪ್ರಯಾಣಿಕರ ಪರದಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: May 15, 2024 | 11:06 PM

ಬಳ್ಳಾರಿ ಜಿಲ್ಲೆಯಾದ್ಯಂತ ಮಳೆಯಾಗದೆ ಸುಮಾರು 30ಕ್ಕೂ ಹೆಚ್ಚು ಕೆರೆಗಳು ಬರಡಾಗಿವೆ. ಆದರೆ ಇಂದು ವರುಣರಾಯ ಕಣ್ತೆರೆದಿದ್ದು, ಜೋರು ಮಳೆ ಆಗಿದೆ. ಹೀಗಾಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಧಾರಾಕಾರ ಮಳೆ ಹಿನ್ನಲೆ ಕೊಟ್ಟೂರು ಬಸ್ ನಿಲ್ದಾಣ ಜಲಾವೃತವಾಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ. ತಮ್ಮೂರಿಗೆ ಹೋಗಲು ಬಸ್ ಹತ್ತಲು ಮಹಿಳಾ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಿಜಯನಗರ, ಮೇ 15: ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಧಾರಾಕಾರ ಮಳೆ (Rain) ಹಿನ್ನಲೆ ಕೊಟ್ಟೂರು ಬಸ್ ನಿಲ್ದಾಣ ಜಲಾವೃತವಾಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ. 2 ಅಡಿ ಎತ್ತರಕ್ಕೆ ನಿಂತ ನೀರಿನಲ್ಲೇ ಪ್ರಯಾಣಿಕರು ಓಡಾಡುವಂತಾಗಿದೆ. ಜಲಾವೃತವಾದ ನಿಲ್ದಾಣದಲ್ಲಿ 10ಕ್ಕೂ ಹೆಚ್ಚು ಕೆಎಸ್​​ಆರ್​​ಟಿಸಿ (KSRTC) ಬಸ್ ನಿಂತುಕೊಂಡಿವೆ.​ ತಮ್ಮೂರಿಗೆ ಹೋಗಲು ಬಸ್ ಹತ್ತಲು ಮಹಿಳಾ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ ಇಲ್ಲದೇ ಬಳ್ಳಾರಿ ಜಿಲ್ಲೆಯಾದ್ಯಂತ 30 ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೆ ಬರಡು ಬರಡಾಗಿವೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on