ವಿಜಯಪುರ: ಶಿವನಾಂದ ಪಾಟೀಲ್ ಮತ್ತು ಕಾಶಪ್ಪನವರ್ ವಿರುದ್ಧ ಕೆಂಡಕಾರಿದ ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 30, 2025 | 11:02 AM

ವಿಜಯಾನಂದ್ ಕಾಶಪ್ಪನವರ್ ಒಬ್ಬ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಅವರು ಮೋಸ ಮಾಡಿದ್ದಾರೆ, ಸಮಾಜದ ಹೆಸರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಹಣ ದೋಚಿದ್ದು ಅಂತ ಚೆನ್ನಾಗಿ ಗೊತ್ತಿದೆ, ಅವರು ಯಾವ ಭಾಷೆಯಲ್ಲಿ ಮಾತಾಡುತ್ತಾರೋ ಅದೇ ಭಾಷೆಯಲ್ಲಿ ಉತ್ತರ ಕೊಡ್ತೀನಿ, ನನ್ನ ಶಬ್ದಕೋಶ ಅವರಿಗಿಂತ ಬಹಳ ದೊಡ್ಡದು ಎಂದು ಯತ್ನಾಳ್ ಹೇಳಿದರು.

ವಿಜಯಪುರ, ಏಪ್ರಿಲ್ 30: ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅದೇ ಜಿಲ್ಲೆಯ ಶಾಸಕರಾದ ಶಿವಾನಂದ ಪಾಟೀಲ್ (Shivanand Patil) ಹಾಗೂ ವಿಜಯಾನಂದ ಕಾಶಪ್ಪನವರ್ ನಡುವೆ ಯುದ್ಧ ಶುರುವಾಗಿದೆ. ಇಂದು ನಗರದಲ್ಲಿ ಮಾತಾಡಿದ ಯತ್ನಾಳ್ ಕಾಂಗ್ರೆಸ್ ಇಬ್ಬರ ಶಾಸಕರ ಮೇಲೂ ಕೆಂಡಕಾರಿದರು. ಶಿವಾನಂದ ಪಾಟೀಲ್​ಗೆ ಬಾಗೇವಾಡಿಯಲ್ಲಿ ಏನೂ ಸಿಗುತ್ತಿಲ್ಲ, ಹಾಗಾಗಿ ಅವರಿಗೆ ವಿಜಯಪುರ ಬರೋದು ಬೇಕಾಗಿದೆ, ಅವರು ಇಲ್ಲಿಂದ ಸ್ಪರ್ಧಿಸಿದರೆ ಮಣ್ಣು ಮುಕ್ಕೋದು ಗ್ಯಾರಂಟಿ, ಯಾಕೆಂದರೆ ಎಲ್ಲ ಹಿಂದೂಗಳು ನನಗೆ ವೋಟು ಹಾಕುತ್ತಾರೆ, ಶಿವಾನಂದ್​ ಗೆ ಮುಸಲ್ಮಾನರ ವೋಟು ಸಹ ಸಿಗಲ್ಲ, ಯಾಕೆಂದರೆ ಮುಸಲ್ಮಾನರು ತಮ್ಮ ಸಮುದಾಯದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸುತ್ತಾರೆ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:  ಯತ್ನಾಳ್ ಬಗ್ಗೆ ಬಹಳ ಕನಸಿಟ್ಟುಕೊಂಡಿದ್ದೆವು, ಅದರೆ ಬಚ್ಚಲು ಬಾಯಿಂದಾಗಿ ಎಲ್ಲ ಹಾಳುಮಾಡಿಕೊಂಡಿದ್ದಾರೆ: ಸ್ವಾಮೀಜಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.