ವಿಜಯಪುರ ಎಸ್​ಬಿಐ ಬ್ಯಾಂಕ್ ದರೋಡೆ: ಸೊಲ್ಲಾಪುರದಲ್ಲಿ ಪತ್ತೆಯಾದ ಕಾರು, ಅದರಲ್ಲಿತ್ತು ಚಿನ್ನ!

Updated on: Sep 17, 2025 | 8:17 AM

ಚಡಚಣದ ಎಸ್‌ಬಿಐ ಬ್ಯಾಂಕ್‌ ದರೋಡೆಕೋರರ ಕಾರು ಸೊಲ್ಲಾಪುರದಲ್ಲಿ ಪತ್ತೆಯಾಗಿದ್ದು, ಆ ಕಾರಿನಲ್ಲಿ ಸ್ವಲ್ಪ ಚಿನ್ನಾಭರಣಗಳೂ ಇದ್ದವು ಎನ್ನಲಾಗಿದೆ. ಬೈಕೊಂದಕ್ಕೆ ಡಿಕ್ಕಿಯಾದ ನಂತರ ಕಾರಿನಲ್ಲಿದ್ದವರನ್ನು ಹಿಡಿಯಲು ಸ್ಥಳೀಯರು ಮುಂದಾದಾಗ ಅವರು ಪಿಸ್ತೂಲ್ ತೋರಿಸಿ ಹೆದರಿಸಿ ಪರಾರಿಯಾಗಿದ್ದಾರೆ. ಸದ್ಯ, ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್ ಮುಂದೆ ಜನ ಜಮಾಯಿಸುತ್ತಿದ್ದಾರೆ. ಬ್ಯಾಂಕ್​ನಲ್ಲಿ ಠೇವಣಿ ಇಟ್ಟವರು ಹಾಗೂ ಗ್ರಾಹಕರು ಜಮಾವಣೆಯಾಗುತ್ತಿದ್ದಾರೆ.

ವಿಜಯಪುರ, ಸೆಪ್ಟೆಂಬರ್ 17: ವಿಜಯಪುರ ಜಿಲ್ಲೆಯ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ ಮಾಡಿ ಪರಾರಿಯಾಗಿರುವ ಗ್ಯಾಂಗ್​ನ ಕಾರು ಸೊಲ್ಲಾಪುರದಲ್ಲಿ ಪತ್ತೆಯಾಗಿರುವುದಾಗಿ ವಿಜಯಪುರ ಪೊಲೀಸ್ ಮೂಲಗಳು ತಿಳಿಸಿವೆ. ಆ ಕಾರಿನಲ್ಲಿ ಸ್ವಲ್ಪ ಚಿನ್ನಾಭರಣಗಳು ಕೂಡ ಇದ್ದವು ಎನ್ನಲಾಗಿದೆ. ಸೊಲ್ಲಾಪುರದಲ್ಲಿ ಬೈಕೊಂದಕ್ಕೆ ಕಾರು ಡಿಕ್ಕಿಯಾಗಿದೆ. ಗ್ರಾಮಸ್ಥರು, ಸ್ಥಳೀಯರು ಕಾರಿನಲ್ಲಿದ್ದವರನ್ನು ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ, ಪಿಸ್ತೂಲ್ ತೋರಿಸಿ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ.

ಬ್ಯಾಂಕ್ ದರೋಡೆ ವಿವರಗಳಿಗೆ ಓದಿ: ವಿಜಯಪುರದ ಚಡಚಣದ ಎಸ್​ಬಿಐ ಬ್ಯಾಂಕ್​​ನಲ್ಲಿ ದರೋಡೆ; ಮ್ಯಾನೇಜರನ್ನು ಕಟ್ಟಿಹಾಕಿ 8 ಕೋಟಿ ರೂ., 50 ಕೆಜಿ ಚಿನ್ನ ಕಳವು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 17, 2025 08:05 AM