ಬಸವ ಜಯಂತಿ ಮತ್ತು ಶಿವಕುಮಾರ ಸ್ವಾಮೀಜಿಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಜಯೇಂದ್ರ ತಮ್ಮ ತಂದೆಯನ್ನು ಹೊಗಳಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 28, 2022 | 8:00 PM

ಅವರು ಪಕ್ಷದ ಉಪಾಧ್ಯಾಕ್ಷರು ಕೂಡ ಅಗಿರುವುದರಿಂದ ಒಬ್ಬ ಹಿರಿಯ ಕಾರ್ಯಕರ್ತನ ಶ್ಲಾಘನೆ ಮಾಡಿರಬಹುದು, ಅಂತ ಹೇಳಿದರೂ ತಪ್ಪಿಲ್ಲ. ಆದರೆ, ಪಕ್ಷದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಿಂದ ನೋಡಿದರೆ ಅವರ ಮಾತುಗಳು ಬೇರೆ ನಾಯಕರಿಗೆ ನೀಡಿರಬಹುದಾದ ಎಚ್ಚರಿಕೆಯ ಥರ ಅನಿಸಿಬಿಡುತ್ತವೆ.

ಹಾಸನ: ಜಿಲ್ಲೆಯ  ಹೊಳರಸೀಪುರನಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಸವ ಜಯಂತಿ ಮತ್ತು ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವ (Shivakumar Swamiji) ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರು ಬಸವಣ್ಣನವರು, ವೀರಶೈವ ಲಿಂಗಾಯತ ಮಠಗಳು, ಸಿದ್ದಗಂಗಾ ಸ್ವಾಮೀಜಿಗಳು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಕೊಂಡಾಡುತ್ತಾ ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ (BS Yediyurappa) ಗುಣಗಾನ ಮಾಡಿದರು. ಸಾಮಾಜಿಕ ಕ್ರಾಂತಿಗೆ ಕಾರಣರಾದ ಅಣ್ಣ ಬಸವಣ್ಣನನವರು ಎಲ್ಲ ಮಠಮಾನ್ಯಗಳು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪ್ರೇರಣೆ ಅಗಿರುವಂತೆಯೇ ಕಳೆದ 30-40 ಜನಸೇವೆಯಲ್ಲಿ ತಮ್ಮ ಬದುಕನ್ನು ತೊಡಗಿಸಿಕೊಂಡ ಬಡವರ, ಶೋಷಿತರ ಮತ್ತು ದಮನಿತರ ಏಳಿಗೆಗಾಗಿ ದುಡಿಯುತ್ತಾ ಒಮ್ಮೆಯಲ್ಲ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸರ್ವರಿಗೂ ಸಮಪಾಲು, ಸಮಬಾಳು ನೀಡಿರುವ ಯಡಿಯೂರಪ್ಪನವರಿಗೂ ಬಸವಣ್ಣನವರು ಅದರ್ಶವಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ವಿಜಯೇಂದ್ರ ಅಭಿಮಾನದಿಂದ ತಮ್ಮ ತಂದೆ ಬಗ್ಗೆ ಮಾತಾಡಿರುವುದು ಸತ್ಯ. ಅದರ ಜೊತೆಗೆ ಅವರು ಪಕ್ಷದ ಉಪಾಧ್ಯಾಕ್ಷರು ಕೂಡ ಅಗಿರುವುದರಿಂದ ಒಬ್ಬ ಹಿರಿಯ ಕಾರ್ಯಕರ್ತನ ಶ್ಲಾಘನೆ ಮಾಡಿರಬಹುದು, ಅಂತ ಹೇಳಿದರೂ ತಪ್ಪಿಲ್ಲ. ಆದರೆ, ಪಕ್ಷದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಿಂದ ನೋಡಿದರೆ ಅವರ ಮಾತುಗಳು ಬೇರೆ ನಾಯಕರಿಗೆ ನೀಡಿರಬಹುದಾದ ಎಚ್ಚರಿಕೆಯ ಥರ ಅನಿಸಿಬಿಡುತ್ತವೆ. ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ವರಿಷ್ಠರು ಟಿಕೆಟ್ ನಿರಾಕರಿಸಿದ್ದು ಅವರಲ್ಲಿ ಮತ್ತು ಯಡಿಯೂರಪ್ಪನವರಲ್ಲಿ ತೀವ್ರ ಸ್ವರೂಪದ ಅಸಮಾಧಾನ ಸೃಷ್ಟಿಸಿರುವುದು ಸುಳ್ಳಲ್ಲ.

ವೀರಶೈವ ಲಿಂಗಾಯತ ಮಠಗಳು ಅನ್ನ ದಾಸೋಹ, ಅಕ್ಷರ ದಾಸೋಹ ಮತ್ತು ಜ್ಞಾನ ದಾಸೋಹದ ಮೂಲಕ ಸಮಾಜಕ್ಕೆ ಗುರುತರವಾದ ಸೇವೆ ಒದಗಿಸುತ್ತಿವೆ ಎಂದು ವಿಜಯೇಂದ್ರ ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.