ನಕ್ಸಲ್ ನೇತ್ರಾವತಿ ದಳದ ಮುಖಂಡ ವಿಕ್ರಂಗೌಡ ಎಎನ್​ಎಫ್ ಮತ್ತು ಪೊಲೀಸ್ ಎನ್​ಕೌಂಟರ್​ನಲ್ಲಿ ಬಲಿ

ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2024 | 10:26 AM

ಕಳೆದ ಒಂದು ವಾರದಿಂದ ನಕ್ಸಲರ ಸದ್ದು ರಾಜ್ಯದಲ್ಲಿ ಕೇಳಿಬರುತ್ತಿದೆ. ಅಸಲಿಗೆ ನಕ್ಸಲ್ ಚಟುವಟಿಕೆಗಳು ನಿಂತು ಹೋಗಿವೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಸಫಲವಾಗಿವೆ ಎಂದು ಭಾವಿಸಲಾಗಿತ್ತು. ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ ನಕ್ಸಲ್ ಚಟುವಟಿಕೆಗಳನ್ನು ಕೊನೆಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಉಡುಪಿ: ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ನಕ್ಸಲರ ಹಾವಳಿ ಕಡಿಮೆಯಾಗಿತ್ತು ಅಥವಾ ಇಲ್ಲವಾಗಿತ್ತು ಅನ್ನೋದು ಸುಳ್ಳಲ್ಲ, ಅದರೆ ಅವರು ಮತ್ತೇ ತಲೆ ಎತ್ತಿರುವುದು ಸಹ ಅಷ್ಟೇ ಸತ್ಯ. ಜಿಲ್ಲೆಯ ಉಡುಪಿ ತಾಲ್ಲೂಕು ಕಬ್ಬಿನಾಲೆಯ ಪೀತೆಬೈಲ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಸಕ್ರಿಯರಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೂಂಬಿಂಗ್ ಆಪರೇಶನ್ ನಡೆಸಿದ ಎಎನ್​ಎಫ್ ಮತ್ತು ಹೆಬ್ರಿ ಪೊಲೀಸರು ನೇತ್ರಾವತಿ ದಳದ ಮುಖಂಡ ವಿಕ್ರಂಗೌಡನನ್ನು ಎನ್ಕೌಂಟರ್​ನಲ್ಲಿ ಸಾಯಿಸಿದ್ದಾರೆ. ನಮ್ಮ ಉಡುಪಿ ವರದಿಗಾರ ನೀಡುವ ಮಾಹಿತಿ ಪ್ರಕಾರ ವಿಕ್ರಂಗೌಡನೊಂದಿಗಿದ್ದ ಇತರ ಮೂವರು ಪರಾರಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಕ್ಸಲ್ ಎನ್​ಕೌಂಟರ್: ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ ಹಿನ್ನೆಲೆ ಇಲ್ಲಿದೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.