ಡಿಸಿ, ತಹಶೀಲ್ದಾರ್ ಡೋಂಟ್ ಕೇರ್: ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

Updated on: Dec 25, 2025 | 9:29 PM

ಕೋಳಿಫಾರಂ ದುವಾರ್ಸನೆಯಿಂದ ಬೇಸತ್ತು ಕೋಳಿ, ಮೊಟ್ಟೆಗಳನ್ನು ಕದ್ದೊಯ್ದಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದಲ್ಲಿ ನಡೆದಿದೆ. ಕೋಳಿಫಾರಂ​​ನಿಂದ ಬರುತ್ತಿದ್ದ ದುವಾರ್ಸನೆಯಿಂದ ಉಣಚಗೇರಿ ಗ್ರಾಮಸ್ಥರು ರೋಸಿ ಹೋಗಿದ್ದರು. ಹೀಗಾಗಿ ಗ್ರಾಮದಿಂದ ಕೋಳಿಫಾರಂ ತೆರವುಗೊಳಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್​ಗೆ ಮನವಿ ಮಾಡಿದ್ದಾರೆ. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜನರು ತಾಳ್ಮೆಯ ಕಟ್ಟೆ ಹೊಡೆದಿದ್ದು, ಗ್ರಾಮಸ್ಥರೇ ಕೋಳಿಫಾರಂಗೆ ನುಗ್ಗಿ ಕೋಳಿ, ಮೊಟ್ಟೆ ಕದ್ದುಕೊಂಡು ಹೋಗಿದ್ದಾರೆ. ಇದರಿಂದ ಮಾಲೀಕ ಕಂಗಾಲಾಗಿದ್ದಾನೆ.

ದಾವಣಗೆರೆ, (ಡಿಸೆಂಬರ್ 25): ಕೋಳಿಫಾರಂ ದುವಾರ್ಸನೆಯಿಂದ ಬೇಸತ್ತು ಕೋಳಿ, ಮೊಟ್ಟೆಗಳನ್ನು ಕದ್ದೊಯ್ದಿರುವ ಘಟನೆ ಗದಗ (Gadag) ಜಿಲ್ಲೆ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದಲ್ಲಿ ನಡೆದಿದೆ.
ಕೋಳಿಫಾರಂ​​ನಿಂದ ಬರುತ್ತಿದ್ದ ದುವಾರ್ಸನೆಯಿಂದ ಉಣಚಗೇರಿ ಗ್ರಾಮಸ್ಥರು ರೋಸಿ ಹೋಗಿದ್ದರು. ಹೀಗಾಗಿ ಗ್ರಾಮದಿಂದ ಕೋಳಿಫಾರಂ ತೆರವುಗೊಳಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್​ಗೆ ಮನವಿ ಮಾಡಿದ್ದಾರೆ. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜನರು ತಾಳ್ಮೆಯ ಕಟ್ಟೆ ಹೊಡೆದಿದ್ದು, ಗ್ರಾಮಸ್ಥರೇ ಕೋಳಿಫಾರಂಗೆ ನುಗ್ಗಿ ಕೋಳಿ, ಮೊಟ್ಟೆ ಕದ್ದುಕೊಂಡು ಹೋಗಿದ್ದಾರೆ. ಇದರಿಂದ ಮಾಲೀಕ ಕಂಗಾಲಾಗಿದ್ದಾನೆ.

Published on: Dec 25, 2025 09:27 PM