ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್ನಲ್ಲಿ ಏನಾಯ್ತು? ಆನೆ ವಿನಯ್ ಕೊಟ್ಟ ಮಾಹಿತಿ
‘ಡೆವಿಲ್’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ದರ್ಶನ್ ಅವರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ‘ಡೆವಿಲ್’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ವಿನಯ್, ಆ ದಿನ ಸೆಟ್ನಲ್ಲಿ ಏನಾಯ್ತು ಎಂಬ ಬಗ್ಗೆ ಮಾತನಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಮೈಸೂರಿನಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕೆ ತೆರಳುತ್ತಿದ್ದ ವೇಳೆ ದರ್ಶನ್ ಅನ್ನು ಪೊಲೀಸರು ಬಂಧಿಸಿದ್ದರು. ‘ಡೆವಿಲ್’ ಸಿನಿಮಾನಲ್ಲಿ ಮಾಜಿ ಬಿಗ್ಬಾಸ್ ಸ್ಪರ್ಧಿ, ನಟ ವಿನಯ್ ವಿಲನ್ ಆಗಿ ನಟಿಸುತ್ತಿದ್ದಾರೆ. ಬಂಧನವಾದ ದಿನವೂ ವಿನಯ್ ಸಹ ಶೂಟಿಂಗ್ ಸೆಟ್ನಲ್ಲಿದ್ದರು. ಅಂದು ಅವರದ್ದೇ ಸೀನ್ನ ಚಿತ್ರೀಕರಣವಾಗುತ್ತಿತ್ತು. ದರ್ಶನ್ ಬಂಧನವಾದಾಗ ‘ಡೆವಿಲ್’ ಸಿನಿಮಾ ಸೆಟ್ನಲ್ಲಿ ಏನೇನಾಯ್ತು? ಅಂದು ದರ್ಶನ್ ಮನಸ್ಥಿತಿ ಹೇಗಿತ್ತು? ‘ಡೆವಿಲ್’ ಸಿನಿಮಾದ ಚಿತ್ರೀಕರಣದ ಕತೆ ಏನು? ಹಲವು ವಿಷಯಗಳ ಬಗ್ಗೆ ವಿನಯ್ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ