ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜಕಾರಣದಲ್ಲಿ ಸ್ವಾಮೀಜಿ ಮತ್ತು ಮಠಾಧೀಶರ ಹಸ್ತಕ್ಷೇಪ ಹೆಚ್ಚಾಗುತ್ತಿದೆಯಲ್ಲ ಎಂದು ಪತ್ರಕರ್ತರೊಬ್ಬರು ಹೇಳಿದ್ದಕ್ಕೆ, ಸ್ವಾಮೀಜಿಗಳ ವಿರುದ್ಧ ಹೆಚ್ಚು ಮಾತಾಡಿ ಅವರ ಮುನಿಸು ಕಟ್ಟಿಕೊಳ್ಳಲು ಇಷ್ಟಪಡದ ಸಿದ್ದರಾಮಯ್ಯ, ಏಯ್ ಹೋಗ್ರಯ್ಯಾ, ಹಸ್ತಕ್ಷೇಪ ಅಂತೆ, ಅದಂತೆ ಇದಂತೆ ಏನೇನೋ ಪ್ರಶ್ನೆ ಕೇಳ್ತೀರಲ್ಲ ಅನ್ನುತ್ತಾ ಅವರಿಗೆ ಬೆನ್ನು ಮಾಡಿದರು.

ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ
|

Updated on: Jun 28, 2024 | 5:22 PM

ದೆಹಲಿ: ದೆಹಲಿಯಲ್ಲಿಂದು ಮಾಧ್ಯ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ನಿಗಮದ ಅಧೀಕ್ಷಕ ಪಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ತನಿಖೆ ಮಾಡುತ್ತಿರುವ ಸಿಐಡಿ ಅಧಿಕಾರಿಗಳು ಪ್ರಕರಣದಲ್ಲಿ 13ನೇ ಆರೋಪಿಯಾಗಿರುವ ವ್ಯಕ್ತಿಗೆ ಜೀವ ಬೆದರಿಕೆ ಹಾಕಿರುವುದ್ನು ಮತ್ತು ಆ ವ್ಯಕ್ತಿ ಕೋರ್ಟ್ ನಲ್ಲಿ ಅಫಿಡವಿಟ್ ಒಂದನ್ನು ದಾಖಲಿಸಸಿರುವ ಸಂಗತಿಯನ್ನು ಅಲ್ಲಗಳೆದರು. ಮೊದಲು ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ಸಿದ್ದರಾಮಯ್ಯ ಜೊತೆಯಲ್ಲೇ ಇದ್ದ ಗೃಹ ಸಚಿವ ಜಿ ಪರಮೇಶ್ವರ್. ಸಿಐಡಿ ಅಧಿಕಾರಿಗಳು ಅಂಥದನ್ನೆಲ್ಲ ಮಾಡಲ್ಲ, ಒಂದು ಪಕ್ಷ ಹೆದರಿಸಿದ್ದು ನಿಜವೇ ಆಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದನ್ನೇ ಮುಖ್ಯಮಂತ್ರಿ ಪುನರುಚ್ಛರಿಸಿದರು. ವೀರಶೈವ ಮಠದ ಸ್ವಾಮೀಜಿಯೊಬ್ಬರು ಲಿಂಗಾಯತ ಸಮುದಾಯದ ನಾಯಕ ಮುಖ್ಯಮಂತ್ರಿಯಾಗಬೇಕು ಅಂತ ಹೇಳಿದ್ದಾರೆ ಎಂದಿದ್ದಕ್ಕೆ ಸಿದ್ದರಾಮಯ್ಯ, ಸ್ವಾಮೀಜಿಗಳು ಹೇಳುತ್ತಿರುರುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿಲ್ಲ, ಅವರಿಗೂ ರಾಜಕೀಯಕ್ಕೂ ಏನು ಸಂಬಂಧ? ಸಿಎಂ, ಡಿಸಿಎಂಗಳನ್ನು ಶಾಸಕರು ಮತ್ತು ಪಕ್ಷದ ಹೈಕಮಾಂಡ್ ಮಾಡುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  

Follow us