ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರ ಬಗ್ಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿದ್ದಾರೆ. ದರ್ಶನ್ ಮಾಡಬೇಕಾಗಿದ್ದಿದ್ದು ಏನು? ಈಗ ಮಾಡಿರುವುದೇನು ಎಂಬ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ವಿಚಾರಣಾಧೀನ ಕೈದಿಯಾಗಿ ಜುಲೈ 4ರ ವರೆಗೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಸಮಯ ಕಳೆಯಬೇಕಿದೆ. ಜುಲೈ 4ರ ಬಳಿಕವೂ ಅವರಿಗೆ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಇದರ ನಡುವೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ದರ್ಶನ್ ಬಗ್ಗೆ ಮಾತನಾಡಿದ್ದು, ಸಿನಿಮಾ ರಂಗದಲ್ಲಿ ದರ್ಶನ್ ಅವರ ಪಯಣ, ಅವರ ಈ ಹಿಂದಿನ ವಿವಾದಗಳು, ಈಗ ನಡೆದಿರುವ ಘಟನೆ ಇನ್ನಿತರೆ ವಿಷಯಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಇನ್ನಿತರೆ ಮಹಾನ್ ನಟರ ಆದರ್ಶ ಪಾಲಿಸಬೇಕಿತ್ತು, ಅದ್ಯಾವುದೂ ಬೇಡವೆಂದರೆ ಅವರ ತಂದೆಯ ಆದರ್ಶವನ್ನಾದರೂ ಅವರು ಪಾಲಿಸಬೇಕಿತ್ತು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 28, 2024 04:12 PM
Latest Videos