ಸ್ವಾಮೀಜಿಗಳು ಹೇಳುತ್ತಿರುವುದರ ಹಿಂದೆ ಬಿಜೆಪಿ ನಾಯಕರ ಕೈವಾಡ ಇರಬಹುದು: ಎನ್ ಚಲುವರಾಯಸ್ವಾಮಿ

ಸ್ವಾಮೀಜಿಗಳು, ಮಠಾಧೀಶರು ಸಾರ್ವಜನಿಕವಾಗಿ ರಾಜಕಾರಣದ ಬಗ್ಗೆ ಹೇಳಿಕೆಗಳನ್ನು ನೀಡುವುದು ಸರಿಯಲ್ಲ, ಅವರಿಗೆ ಏನಾದರೂ ಹೇಳಬೇಕಿದ್ದರೆ ಯಾರಿಗೆ ಹೇಳಬೇಕಾಗಿದೆಯೋ ಅವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಹೇಳಲಿ, ಅದರಲ್ಲಿ ತಪ್ಪೇನಿಲ್ಲ, ಅದರೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಅದು ಜನರಲ್ಲಿ ಗೊಂದಲ ಮೂಡಿಸುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಸ್ವಾಮೀಜಿಗಳು ಹೇಳುತ್ತಿರುವುದರ ಹಿಂದೆ ಬಿಜೆಪಿ ನಾಯಕರ ಕೈವಾಡ ಇರಬಹುದು: ಎನ್ ಚಲುವರಾಯಸ್ವಾಮಿ
|

Updated on: Jun 28, 2024 | 4:31 PM

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಒಕ್ಕಲಿಗ ಮತ್ತು ವೀರಶೈವ ಪಂಚಪೀಠದ ಸ್ವಾಮೀಜಿಗಳು ರಾಜ್ಯ ರಾಜಕಾರಣದಲ್ಲಿ ವಿಪರೀತ ಆಸಕ್ತಿ ತೋರಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಮಾತಾಡುತ್ತಿರುವುದನ್ನು ಗಮನಿಸಿದರೆ ಒಂದೋ ರಾಜ್ಯದ ಟೈಮ್ ಸರಿಯಿರಲಿಕ್ಕಿಲ್ಲ ಅಥವಾ ಬಿಜೆಪಿ ನಾಯಕರೇ ಇದನ್ನೆಲ್ಲ ಅವರಿಂದ ಹೇಳಿಸುತ್ತಿರಬಹುದು ಅನಿಸುತ್ತೆ ಎಂದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ 17 ರಲ್ಲಿ ಮಾತ್ರ ಗೆದ್ದಿದೆ. ಹಾಗಾಗಿ ಹತಾಷರಾಗಿರುವ ಬಿಜೆಪಿ ನಾಯಕರು ಇಂಥ ಕೆಲಸಗಳಿಗೆ ಮುಂದಾಗಿದ್ದರೆ ಆಶ್ಚರ್ಯವಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು. ಆದರೆ ಸರ್ಕಾರದಲ್ಲಿ ಸಿಎಂ ಆಗುವ ಆಕಾಂಕ್ಷೆಯಿಟ್ಟುಕೊಂಡಿರುವ ಕಾಂಗ್ರೆಸ್ ನಾಯಕರೇ ಪರೋಕ್ಷವಾಗಿ ಹೀಗೆ ಸ್ವಾಮೀಜಿಗಳಿಂದ ಹೇಳಿಸುತ್ತಿದ್ದಾರೆ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಸಚಿವ, ಯಾರು ಏನಂದುಕೊಂಡರೇನು, ಯಾರಿಂದ ಹೇಳಿಸಿದರೇನು? ಹೈಕಮಾಂಡ್ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದವರೇ ಆಗಿರುವುದರಿಂದ ಅವರಿಗೆ ಎಲ್ಲವೂ ಗೊತ್ತಿದೆ ಮತ್ತು ಸರಿಮಾಡುವ ಶಕ್ತಿಯೂ ಅವರಲ್ಲಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯದಲ್ಲಿ ಕಾಂಗ್ರೆಸ್ ಗೆ ಎದುರಾದ ಸೋಲಿನ ಬಗ್ಗೆ ಮಾತಾಡದೆ ಮೌನವಹಿಸುವುದೇ ಸೂಕ್ತ: ಎನ್ ಚಲುವರಾಯಸ್ವಾಮಿ

Follow us