ಮಂಡ್ಯದಲ್ಲಿ ಕಾಂಗ್ರೆಸ್ ಗೆ ಎದುರಾದ ಸೋಲಿನ ಬಗ್ಗೆ ಮಾತಾಡದೆ ಮೌನವಹಿಸುವುದೇ ಸೂಕ್ತ: ಎನ್ ಚಲುವರಾಯಸ್ವಾಮಿ
ಮಂಡ್ಯದ ಮತದಾರರು, 2018 ರಲ್ಲಿ ಕುಮಾರಸ್ವಾಮಿಯವರ ಮಗನನ್ನು ತಿರಸ್ಕರಿಸಿದ್ದರು ಮತ್ತು 2023 ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್ ಪಕ್ಷಕ್ಕೆ ಮಣೆ ಹಾಕಿರಲಿಲ್ಲ, ಈಗ ಗೆಲ್ಲಿಸಿದ್ದಾರೆ, ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏನು ಮಾಡುತ್ತಾರೋ ಕಾದು ನೋಡೋಣ ಎಂದು ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಬಗ್ಗೆ ಮಾತಾಡುವಾಗ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಹೇಳಬೇಕಾಗಿದ್ದನ್ನು ನೇರವಾಗಿ ಹೇಳಲ್ಲ. ಇವತ್ತು ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಅವರು, ಸುಮಲತಾ ಅವರು ಬುದ್ಧಿವಂತರಿದ್ದಾರೆ, ಬುದ್ಧಿವಂತರ ಬಗ್ಗೆ ಏನು ಮಾತಾಡೋಕ್ಕಾಗುತ್ತೆ? ಅಂತ ಹೇಳಿ, ಅವರು ಜೆಡಿಎಸ್ ಪಕ್ಷದಲ್ಲಿದ್ದಾರೋ, ಬಿಜೆಪಿ ಜೊತೆ ಇದ್ದಾರೋ ಅಂತ ಗೊತ್ತಿಲ್ಲ, ಅವರಿಗೆ ಒಳ್ಳೆಯದಾಗಲಿ ಅಂತ ಕೊಂಕು ಮಾತಾಡುತ್ತಾರೆ. ಮಂಡ್ಯ ಕ್ಷೇತ್ರದಲ್ಲಿ (Mandya LS seat) ಕಾಂಗ್ರೆಸ್ ಪಕ್ಷಕ್ಕೆ ಎದುರಾದ ಭಾರೀ ಸೋಲಿನ ಬಗ್ಗೆ ಮಾತಾಡಿದ ಸಚಿವ, ಚುನಾವಣೆಗಳಲ್ಲಿ ಹೀಗೆ ಆಗುತ್ತಿರುತ್ತದೆ. ಆದರೆ ಜನರ ತೀರ್ಪನ್ನು ಅಂಗೀಕರಿಸಿ ತಲೆ ಬಾಗಿದ್ದೇನೆ, ಸೋಲಿನ ವಿಮರ್ಶೆ ಮಾಡುತ್ತಾ ಕೂರಲಾಗಲ್ಲ, ಸೋತಾಗ ಅದನ್ನು ಅಂಗೀಕರಿಸುವ ಗಟ್ಟಿತನ ಇರಬೇಕಾಗುತ್ತದೆ, ಹಾಗಾಗಿ ಮಂಡ್ಯ ಫಲಿತಾಂಶದ ಬಗ್ಗೆ ಚರ್ಚೆ ಮಾಡದೆ ಮೌನವಹಿಸುವುದು ಸೂಕ್ತ ಎಂದರು. ಮಂಡ್ಯದ ಮತದಾರರು, 2018 ರಲ್ಲಿ ಕುಮಾರಸ್ವಾಮಿಯವರ ಮಗನನ್ನು ತಿರಸ್ಕರಿಸಿದ್ದರು ಮತ್ತು 2023 ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್ ಪಕ್ಷಕ್ಕೆ ಮಣೆ ಹಾಕಿರಲಿಲ್ಲ, ಈಗ ಗೆಲ್ಲಿಸಿದ್ದಾರೆ, ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏನು ಮಾಡುತ್ತಾರೋ ಕಾದು ನೋಡೋಣ ಎಂದು ಚಲುವರಾಯಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೆನ್ ಡ್ರೈವ್ ಪಬ್ಲಿಕ್ ಆಗುವ ಮೊದಲು ದೇವರಾಜೇಗೌಡ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು ಯಾಕೆ ಚರ್ಚೆಯಾಗುತ್ತಿಲ್ಲ? ಚಲುವರಾಯಸ್ವಾಮಿ