ಸಚಿವ ನಾಗೇಂದ್ರ ರಾಜೀನಾಮೆ ಬಗ್ಗೆ ಕೇಳಿದಾಗ ಸಿದ್ದರಾಮಯ್ಯ ಅಸಮಂಜಸ ಪ್ರತಿಕ್ರಿಯೆ ನೀಡಿದರು!
ಯಾರು ರಾಜೀನಾಮೆ, ಯಾಕೆ ರಾಜೀನಾಮೆ ಅಂತ ಮಾತಾಡುವ ಮುಖ್ಯಮಂತ್ರಿ, ನಿನ್ನೆ ಅವನ್ನು ಕರೆಸಿ ಮಾತಾಡಿದ್ದು ನಿಜ, ರಾಜೀನಾಮೆ ಕೇಳಲೆಂದೇ ಕರೆಸಿ ಮಾತಾಡಿದ್ದೇನೆ ಅಂತ ಭಾವಿಸುವುದು ತಪ್ಪು ಎನ್ನುತ್ತಾರೆ. ಮುಂದುವರಿದು ಮಾತಾಡುವ ಅವರು ನೋಡೋಣ ಇನ್ನೂ ಹೇಳಿಲ್ಲ ಅನ್ನುತ್ತಾ ಪತ್ರಕರ್ತರಿಗೆ ಬೆನ್ನು ಹಾಕುತ್ತಾರೆ.
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಬಿ ನಾಗೇಂದ್ರ (B Nagendra) ಅವರನ್ನು ಕರೆಸಿ ಮಾತಾಡಿದಾಗಲೇ ಸಚಿವ ರಾಜೀನಾಮೆ ಸಲ್ಲಿಸಲಿದ್ದಾರೆ ಅನ್ನೋದು ಖಾತ್ರಿಯಾಗಿತ್ತು. ಆದರೆ ಗುರುವಾರ ಮಧ್ಯಾಹ್ನದವರೆಗೆ ನಾಗೇಂದ್ರ ರಾಜೀನಾಮೆ ಸಲ್ಲಿಸಿಲ್ಲ. ಅವರ ರಾಜನಾಮೆ ಆಗ್ರಹಿಸಿ ಬಿಜೆಪಿ ನಾಯಕರು (BJP leaders) ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ಸಿದ್ದರಾಮಯ್ಯನವರಿಗೆ ನಾಗೇಂದ್ರ ರಾಜೀನಾಮೆ ಬಗ್ಗೆ ಕೇಳಿದಾಗ ಅದೇನು ವಿಷಯವೇ ಅಲ್ಲವೆಂಬಂತೆ ಮಾತಾಡಿದರು. ಯಾರು ರಾಜೀನಾಮೆ, ಯಾಕೆ ರಾಜೀನಾಮೆ ಅಂತ ಮಾತಾಡುವ ಮುಖ್ಯಮಂತ್ರಿ, ನಿನ್ನೆ ಅವನ್ನು ಕರೆಸಿ ಮಾತಾಡಿದ್ದು ನಿಜ, ರಾಜೀನಾಮೆ ಕೇಳಲೆಂದೇ ಕರೆಸಿ ಮಾತಾಡಿದ್ದೇನೆ ಅಂತ ಭಾವಿಸುವುದು ತಪ್ಪು ಎನ್ನುತ್ತಾರೆ. ಮುಂದುವರಿದು ಮಾತಾಡುವ ಅವರು ನೋಡೋಣ ಇನ್ನೂ ಹೇಳಿಲ್ಲ ಅನ್ನುತ್ತಾ ಪತ್ರಕರ್ತರಿಗೆ ಬೆನ್ನು ಹಾಕುತ್ತಾರೆ. ಸಚಿವನ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಯಾಕೆ ಮೀನ ಮೇಷದ ಎಣಿಸುತ್ತಿದ್ದಾರೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ನಾಗೇಂದ್ರ ರಾಜೀನಾಮೆಗೆ ಸೂಚಿಸಿಲ್ಲವೆಂದ ಸಿಎಂ ಸಿದ್ದರಾಮಯ್ಯ