ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯವಾದರೆ ಮತ್ತೊಮ್ಮೆ ಪ್ರತಿಭಟನೆ ನಡೆಸುವ ಸುಳಿವು ನೀಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯ ತಾವು ಹೇಳಬೇಕಿರುವುದನ್ನು ಯಾವುದೇ ಮುಲಾಜಿಲ್ಲದೆ ಹೇಳುತ್ತಾರೆ. ಹಿಂದೆ ಅವರು ತಮ್ಮ ಸಂಪುಟ ಸಚಿವರು ಮತ್ತು ಶಾಸಕರೊಂದಿಗೆ ದೆಹಲಿಯ ಜಂತರ್ ಮಂತರ್ ನಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಪ್ರತಿಭಟನೆ ನಡೆಸಿದ್ದರು. ಅವರ ನಡೆಯನ್ನು ಮಾಧ್ಯಮಗಳು ಮತ್ತು ಕರ್ನಾಟಕದ ಸಂಸದರೇ ತೀವ್ರವಾಗಿ ಟೀಕಿಸಿದ್ದರು. ಅದರೆ, ಸಿದ್ದರಾಮಯ್ಯ ರಾಜ್ಯದ ಹಕ್ಕು ಸಿಗದಿದ್ದರೆ ಮತ್ತೊಮ್ಮೆ ಪ್ರತಿಭಟನೆ ನಡೆಸುವುದಾಗಿ ಹೇಳುತ್ತಾರೆ.

ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯವಾದರೆ ಮತ್ತೊಮ್ಮೆ ಪ್ರತಿಭಟನೆ ನಡೆಸುವ ಸುಳಿವು ನೀಡಿದ ಸಿದ್ದರಾಮಯ್ಯ
|

Updated on: Jun 28, 2024 | 3:42 PM

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಇಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆ ಹಣದ ಹಂಚಿಕೆ ಸರಿಯಾದ ರೀತಿಯಲ್ಲಿ ಆಗದಿದ್ದರೆ ಮತ್ತೊಮ್ಮೆ ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಪ್ರತಿಭಟನೆ ನಡೆಸುವ ಸುಳಿವು ನೀಡಿದರು. ಪತ್ರಕರ್ತರೊಬ್ಬರರು ಹಣಕಾಸು ಆಯೋಗ ಬದಲಾದಾಗ ಹೊಸ ನಿಯೋಗವು ಜನಗಣತಿಯ ಆಧಾರದ ಮೇಲೆ ತೆರಿಗೆ ಹಣವನ್ನು ಹಂಚುವ ಪ್ರಕ್ರಿಯೆಗೆ ಮುಂದಾಗುತ್ತದೆ, ಆದರೆ 2011 ರ ನಂತರ ಜನಗಣತಿ ನಡೆದೇ ಇಲ್ಲವಲ್ಲ ಅಂತ ಹೇಳಿದಾಗ ಸಿದ್ದರಾಮಯ್ಯ ಆ ಕಾರಣಕ್ಕಾಗೇ ತಮ್ಮ ಸರ್ಕಾರ 1971 ರ ಜನಗಣತಿಯನ್ನು ತೆರಿಗೆ ಹಣ ಹಂಚಿಕೆಗೆ ಆಧಾರವಾಗಿಟ್ಟುಕೊಳ್ಳುವಂತೆ ಆಯೋಗಕ್ಕೆ ಮನವಿ ಮಾಡುತ್ತಿರೋದು, 16ನೇ ಹಣಕಾಸು ಆಯೋಗ ರಾಜ್ಯಕ್ಕೆ ಬಂದಾಗ ಇದೇ ಅಂಶವನ್ನು ಅವರ ಮುಂದೆ ಪ್ರಬಲವಾಗಿ ಮಂಡಿಸುತ್ತೇವೆ ಎಂದು ಹೇಳಿದರು. ಆಯೋಗವೇನಾದರೂ ಬೇರೆ ಮಾನದಂಡಗಳನ್ನು ಪರಿಗಣಿಸುವ ಬಗ್ಗೆ ಮಾತಾಡಿದರೆ ಅಂತ ಅದೇ ಪತ್ರಕರ್ತ ಮರುಪ್ರಶ್ನೆ ಮಾಡಿದಾಗ ತಾಳ್ಮೆ ಕಳೆದುಕೊಳ್ಳುವ ಸಿದ್ದರಾಮಯ್ಯ ಒಕ್ಕೂಟ ವ್ಯವಸ್ಥೆಯಲ್ಲಿ ಹಾಗೆಲ್ಲ ಆಗಲ್ಲಪ್ಪ ಎಂದು ಸಿಡುಕುತ್ತಾ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗದಿದ್ದರೆ ಪ್ರತಿಭಟನೆ ನಡೆಸುವ ಮಾತನ್ನಾಡುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಮುಖ್ಯಮಂತ್ರಿ ಸಿದ್ದರಾಮಯ್ಯ 

Follow us