ಹಿರೀಕರಾಗಿರುವ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ

ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕ ನಂತರವೂ ಹೆಚ್ ಡಿ ಕುಮಾರಸ್ವಾಮಿ ಅತೃಪ್ತರೇ? ಪುನಃ ಕರ್ನಾಟಕದ ಮುಖ್ಯಮಂತ್ರಿಯಾಗೋದೇ ಅವರ ಗುರಿಯೇ? ಕೇವಲ 19 ಸ್ಥಾನ ಗೆದ್ದವರು ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆಯೇ? ನಿಖಿಲ್ ಕುಮಾರಸ್ವಾಮಿಯವರ ಮಾತುಗಳಿಂದ ಕನ್ನಡಿಗರಲ್ಲಿ ಇಂಥ ಪ್ರಶ್ನೆಗಳು ಹುಟ್ಟಿಕೊಂಡಿದ್ದರೆ ಆಶ್ಚರ್ಯವಿಲ್ಲ

Follow us
|

Updated on: Jun 28, 2024 | 2:17 PM

ಮಂಡ್ಯ: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಕೆಲವು ಸಂಗತಿಗಳನ್ನು ಒಗಟಿನ ರೂಪದಲ್ಲಿ ಮಾತಾಡಿದರು. ಕುಮಾರಸ್ವಾಮಿಯವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆಯೇ? ಕಾಂಗ್ರೆಸ್ ಶಾಸಕರು ನಿಮ್ಮ ಸಂಪರ್ಕದಲ್ಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಅವರು ಕಾಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಭಗವಂತನಿಗೆ ಮಾತ್ರ ಗೊತ್ತಿರುವ ಸಂಗತಿಗಳನ್ನು ನನಗೆ ಕೇಳಿದರೆ ಹೇಗೆ? ಕೆಲವು ಸಂಗತಿಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡೋದು ಸೂಕ್ತವಲ್ಲ ಎನ್ನುತ್ತಾರೆ. ಚಂದ್ರಶೇಖರ್ ಶ್ರೀಗಳಿಗೆ ಸಚಿವ ಕೆಎನ್ ರಾಜಣ್ಣ ಅವರು ಕಾವಿ ಬಿಟ್ಟುಕೊಡುತ್ತಾರಾ, ನಾನೂ ಸ್ವಾಮೀಜಿ ಅಗ್ತೀನಿ ಅಂತ ಹೇಳಿರುವುದಕ್ಕೆ ಉತ್ತರಿಸಿದ ನಿಖಿಲ್, ರಾಜಣ್ಣನವರು ವಯಸ್ಸಿನಲ್ಲಿ ಹಿರೀಕರು, ಅವರ ಬಗ್ಗೆ ಗೌರವವಿದೆ, ಅದರೆ ಸ್ವಾಮೀಜಿಗಳು ಸಮಾಜಮುಖಿ ಕೆಲಸ ಮಾಡುತ್ತಾರೆ, ಅವರ ಬಗ್ಗೆ ಲಘುವಾಗಿ ರಾಜಣ್ಣ ಮಾತಾಡೋದು ಸರಿಯಲ್ಲ, ಅವರು ಮಾತಾಡುವಾಗ ಎಚ್ಚರಿಕೆಯಿಂದ ಮಾತಾಡಲಿ ಎಂದಷ್ಟೇ ಹೇಳುತ್ತೇನೆ ಎಂದು ನಿಖಿಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದರ್ಶನ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಶಾಕಿಂಗ್ ರಿಯಾಕ್ಷನ್