AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಶಾಕಿಂಗ್ ರಿಯಾಕ್ಷನ್

ದರ್ಶನ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಶಾಕಿಂಗ್ ರಿಯಾಕ್ಷನ್

ಕಿರಣ್ ಹನುಮಂತ್​ ಮಾದಾರ್
|

Updated on: Jun 13, 2024 | 4:14 PM

Share

ಟ ದರ್ಶನ್​ ಮತ್ತು ಆತನ ಸಹಚರರು ಸೇರಿಕೊಂಡು ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬುವವರನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಈ ಕುರಿತು ಬೆಂಗಳೂರಿನಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.

ಬೆಂಗಳೂರು, ಜೂ.13: ನಟ ದರ್ಶನ್​ ಮತ್ತು ಆತನ ಸಹಚರರು ಸೇರಿಕೊಂಡು ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬುವವರನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ‘ಈ ಘಟನೆ ಸಂಬಂಧ ನಾನು ಮಾತನಾಡಲು ಹೋಗುವುದಿಲ್ಲ, ಈಗಾಗಲೇ ತನಿಖೆ ಶುರುವಾಗಿದೆ. ವರದಿ ಬಂದ ಮೇಲೆ ನೋಡಿಕೊಂಡು ಪ್ರತಿಕ್ರಿಯಿಸುವೆ ಎಂದರು. ಜೊತೆಗೆ ಚಿತ್ರನಟರು ಅಥವಾ ರಾಜಕೀಯದಲ್ಲಿ ಇರುವವರು ಯಾರೇ ಆಗಬಹುದು, ನಮ್ಮ ನಡೆಯನ್ನ ಸಾರ್ವಜನಿಕರು ಗಮನಿಸುತ್ತಿರುತ್ತಾರೆ. ಹಾಗಾಗಿ ಒಂದು ಹೆಜ್ಜೆ ಇಡುವಾಗಲೂ ಸೂಕ್ಷ್ಮವಾಗಿ ಇಡಬೇಕಾಗುತ್ತದೆ. ನಾವು ಸಾರ್ವಜನಿಕ ಬದುಕಿನಲ್ಲಿ ಇರುವಾಗ ತೆರೆದ ಪುಸ್ತಕದಂತೆ, ಹಾಗಾಗಿ ಇನ್ನೊಬ್ಬರಿಗೆ ಆದರ್ಶವಾಗಿ ಬದುಕಬೇಕು ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ