ರೇಣುಕಾಸ್ವಾಮಿ ಹತ್ಯೆ ಕೇಸ್: ಕೊಲೆ ಆರೋಪಿಗೆ ಮೊಬೈಲ್ ಕೊಟ್ಟ ಪೊಲೀಸ್ ಸಿಬ್ಬಂದಿ, ದೃಶ್ಯ ಸೆರೆ

ನಿನ್ನೆ ಬೆಂಗಳೂರಿನ R.R.ನಗರದ ಪಟ್ಟಣಗೆರೆ ಶೆಡ್​​ನಲ್ಲಿ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಯುತ್ತಿರುವಾಗ ಓರ್ವ ಆರೋಪಿಗೆ ಪೊಲೀಸ್ ಸಿಬ್ಬಂದಿ ಮೊಬೈಲ್ ಕೊಟ್ಟಿದ್ದು, ಆತ ಮಾತಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಪೊಲೀಸರ ಬಳಿ ಕಾಡಿ ಬೇಡಿ ಆರೋಪಿ ಮೊಬೈಲ್ ಪಡೆದಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಕೇಸ್: ಕೊಲೆ ಆರೋಪಿಗೆ ಮೊಬೈಲ್ ಕೊಟ್ಟ ಪೊಲೀಸ್ ಸಿಬ್ಬಂದಿ, ದೃಶ್ಯ ಸೆರೆ
|

Updated on: Jun 13, 2024 | 4:47 PM

ಬೆಂಗಳೂರು, ಜೂನ್​ 13: ನಟ ದರ್ಶನ್ (Darshan) ಮತ್ತು ಗ್ಯಾಂಗ್​​ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ನಿನ್ನೆ R.R.ನಗರದ ಪಟ್ಟಣಗೆರೆ ಶೆಡ್​​ನಲ್ಲಿ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಲಾಗಿದೆ. ಈ ವೇಳೆ ಕೊಲೆ ಆರೋಪಿಗೆ ಪೊಲೀಸ್ (Police) ಸಿಬ್ಬಂದಿ ಮೊಬೈಲ್ ಕೊಟ್ಟಿದ್ದಾರೆ. ಓರ್ವ ಆರೋಪಿ ಮೊಬೈಲ್​ನಲ್ಲಿ ಮಾತಾಡಿದ್ದ ದೃಶ್ಯಇದೀಗ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಪೊಲೀಸರ ಬಳಿ ಕಾಡಿ ಬೇಡಿ ಆರೋಪಿ ಮೊಬೈಲ್ ಪಡೆದಿದ್ದಾರೆ ಎನ್ನಲಾಗಿದ್ದು, ಕೆಲಕಾಲ ಯಾರೊಂದಿಗೂ ಆರೋಪಿ ಮಾತನಾಡಿದ್ದಾರೆ. ಅತ್ತ ಆರೋಪಿ ಮೊಬೈಲ್​​​ನಲ್ಲಿ ಮಾತಾಡ್ತಿದ್ರು ಪೊಲೀಸರು ಸುಮ್ಮನಿದ್ದರು. ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್​ಪೆಕ್ಟರ್​​ ಗಿರೀಶ್ ನಾಯ್ಕ್ ನೇತೃತ್ವದಲ್ಲಿ ನಿನ್ನೆ ಮಹಜರು ನಡೆದಿತ್ತು. ವಿಡಿಯೋ ನೋಡಿ.

ವರದಿ: ಪ್ರದೀಪ್​ ಕ್ರೈಂ 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us