ಡಿಕೆ ಸುರೇಶ್ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಆರ್ ಅಶೋಕರಿಂದ ಮತ್ತೊಂದು ಅಸಂಬದ್ಧ ಹೇಳಿಕೆ!
ಅಸಲಿಗೆ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಒಂದು ವರ್ಷ ಕಳೆದರೂ ಅಶೋಕ ಚೇತರಿಸಿಕೊಂಡಂತಿಲ್ಲ. ನೀವು ಗಮನಿಸಿರಬಹುದು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಿಂದ ಅಶೋಕ ಅವರು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಟೀಕಿಸುತ್ತಲೇ ಇದ್ದಾರೆ.
ಕೋಲಾರ: ವಿರೋಧ ಪಕ್ಷದ ನಾಯಕ ಅರ್ ಅಶೋಕ ಏನು ಮಾತಾಡುತ್ತಾರೋ ಅಂತ ಅರ್ಥವಾಗಲ್ಲ ಮಾರಾಯ್ರೇ. ಕೋಲಾರದಲ್ಲಿ ಅವರು ಹೇಳೋದನ್ನು ಕೇಳಿ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರಂತೆ! ಡಿಕೆ ಶಿವಕುಮಾರ್ ಉಪಟಳ ಸಿದ್ದರಾಮಯ್ಯಗೆ ಜಾಸ್ತಿ ಆಗಿತ್ತಂತೆ, ತನ್ನಿಂದ ಮುಖ್ಯಮಂತ್ರಿ ಸ್ಥಾನ ಕಿತ್ತುಕೊಳ್ಳುತ್ತಾರೆ ಎಂಬ ಆತಂಕ ಶುರುವಾಗಿತ್ತಂತೆ, ಸುರೇಶ್ ರನ್ನು ಸೋಲಿಸಿದರೆ ಅಣ್ಣತಮ್ಮಂದಿರಿಬ್ಬರೂ ತೆಪ್ಪಗಾಗಿಬಿಡುತ್ತಾರೆ ಅಂದುಕೊಡು ಸುರೇಶ್ ರನ್ನು ಸೋಲಿಸಿಬಿಟ್ಟರು ಅಂತ ಅಶೋಕಣ್ಣ ಹೇಳುತ್ತಾರೆ. ಹಿಂದೆ ಪರಮೇಶ್ವರ್ ಅವರನ್ನು ಸಹ ಸಿದ್ದರಾಮಯ್ಯ ಸೋಲಿಸಿದ್ದರು ಅಂತ ಅಶೋಕ್ ಹೇಳುತ್ತಾರೆ. ಅಂದರೆ ಅಶೋಕ್ ಹೇಳುವ ಅರ್ಥ ಡಾ ಸಿಎನ್ ಮಂಜುನಾಥ ಅವರ ಜನಪ್ರಿಯತೆ ಯಾವ ಲೆಕ್ಕಕ್ಕೂ ಇಲ್ಲ, ಸಿದ್ದರಾಮಯ್ಯ ತಂತ್ರ ಹೂಡಿರದಿದ್ದರೆ ಡಾಕ್ಟರ್ ಸಾಹೇಬರಿಗೆ ಒಂದು ವೋಟೂ ಬೀಳುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ ಮೊದಲಾದವರೆಲ್ಲ ಡಾ ಮಂಜುನಾಥ್ ಅವರಿಗಾಗಿ ಪ್ರಚಾರ ಮಾಡಿದ್ದು ವ್ಯರ್ಥ! ಹೌದಾ ಅಶೋಕ ಅವರೇ? ತಮ್ಮ ಅಸಂಬದ್ಧ ಮಾತುಗಳಿಂದ ಅಶೋಕ ತಮ್ಮ ಪಕ್ಷದ ವರಿಷ್ಠರನ್ನು ಅವಮಾನಿಸುತ್ತಿದ್ದಾರೆ. ಮಾತಾಡುವಾಗ ಎಚ್ಚರವಿರಲಿ ಅಂತ ವಯಸ್ಸಿನಲ್ಲಿ ತಮಗಿಂತ ಬಹಳ ಚಿಕ್ಕವರಾಗಿರುವ ವಿಜಯೇಂದ್ರ ಅವರಿಂದ ಹೇಳಿಸಿಕೊಳ್ಳುವವರೆಗೆ ಅಶೋಕ ಹೀಗೆ ಮಾತಾಡುವುದನ್ನು ಮುಂದುವರಿಸಲಿದ್ದಾರೆ ಅನಿಸುತ್ತೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸರ್ಕಾರ ಪತನದ ಕ್ಷಣಗಣನೆ ಆರಂಭವಾಗಿದೆ, ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಉರುಳುತ್ತೆ: ಅರ್ ಅಶೋಕ