ಪುನೀತ್ ಜನ್ಮದಿನ: ಸಮಾಧಿ ಬಳಿ ಅಶ್ವಿನಿ ಯಾಕೆ ಬರಲಿಲ್ಲ? ಉತ್ತರಿಸಿದ ವಿನಯ್
ಇಂದು (ಮಾರ್ಚ್ 17) ಪುನೀತ್ ರಾಜ್ಕುಮಾರ್ ಸಮಾಧಿಗೆ ಡಾ. ರಾಜ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಲು ಸಮಾಧಿ ಬಳಿ ಬಂದಿದ್ದಾರೆ. ಆದರೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಬರಲು ಸಾಧ್ಯವಾಗಿಲ್ಲ. ಯಾಕೆ ಎಂಬ ಪ್ರಶ್ನೆಗೆ ವಿನಯ್ ರಾಜ್ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಾವಿರಾರು ಅಭಿಮಾನಿಗಳು
ಇಂದು ಪುನೀತ್ ರಾಜ್ಕುಮಾರ್ ಜನ್ಮದಿನವನ್ನು (Puneeth Rajkumar Birthday) ಅಭಿಮಾನಿಗಳು ಸಡಗರದಿಂದ ಆಚರಿಸುತ್ತಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ನೋವಿನ ನಡುವೆಯೂ ವಿವಿಧ ಕಾರ್ಯಗಳನ್ನು ಮಾಡಲಾಗುತ್ತಿದೆ. ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು ಪುನೀತ್ ಸಮಾಧಿ ಬಳಿ ಬಂದು ಪೂಜೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಇಲ್ಲಿಗೆ ಆಗಮಿಸಿ ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಿದ್ದಾರೆ. ಆದರೆ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ಇಂದು (ಮಾರ್ಚ್ 17) ಅಪ್ಪು ಸಮಾಧಿ ಬಳಿ ಬಂದಿಲ್ಲ. ಯಾಕೆ ಎಂಬ ಪ್ರಶ್ನೆಗೆ ವಿನಯ್ ರಾಜ್ಕುಮಾರ್ ಉತ್ತರಿಸಿದ್ದಾರೆ. ‘ಅವರು ಊರಲ್ಲಿ ಇಲ್ಲ. ಹಾಗಾಗಿ ಅವರಿಗೆ ಬರೋಕೆ ಆಗಿಲ್ಲ. ನಾಳೆ ಅಥವಾ ನಾಡಿದ್ದು ಇಲ್ಲಿಗೆ ಬರುತ್ತಾರೆ’ ಎಂದು ವಿನಯ್ ರಾಜ್ಕುಮಾರ್ (Vinay Rajkumar) ಹೇಳಿದ್ದಾರೆ. ಮೂಲಗಳ ಪ್ರಕಾರ, ಅಶ್ವಿನಿ ರಾಜ್ಕುಮಾರ್ ಅವರು ತಮ್ಮ ಕುಲದೇವರಾದ ವಜ್ರೇಶ್ವರಿ ದೇವಸ್ಥಾನಕ್ಕೆ ತೆರಳಿದ್ದಾರೆ. ಆ ಕಾರಣದಿಂದ ಅವರು ಇಂದು ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.