‘ನಾವು ಅಂಥ ಕೆಲಸ ಮಾಡುವವರಲ್ಲ’; ರೇಣುಕಾ ಸ್ವಾಮಿ ಕುಟುಂಬ ಭೇಟಿ ಬಳಿಕ ವಿನೋದ್ ರಾಜ್ ಸ್ಪಷ್ಟನೆ
ನಟ ವಿನೋದ್ ರಾಜ್ ಅವರು ದರ್ಶನ್ ಅವರನ್ನು ಜೈಲಲ್ಲಿ ಭೇಟಿ ಆಗಿದ್ದರು. ಆ ಬಳಿಕ ರೇಣುಕಾ ಸ್ವಾಮಿ ಕುಟುಂಬದವರನ್ನೂ ಮೀಟ್ ಮಾಡಿದ್ದರು. ವಿನೋದ್ ರಾಜ್ ರಾಜಿ ಸಂಧಾನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ವಿನೋದ್ ರಾಜ್ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
ವಿನೋದ್ ರಾಜ್ ಅವರು ಇತ್ತೀಚೆಗೆ ದರ್ಶನ್ ಅವರನ್ನು ಜೈಲಲ್ಲಿ ಭೇಟಿ ಆಗಿದ್ದರು. ಆ ಬಳಿಕ ರೇಣುಕಾ ಸ್ವಾಮಿ ಕುಟುಂಬದವರನ್ನೂ ಮೀಟ್ ಮಾಡಿದ್ದರು. ವಿನೋದ್ ರಾಜ್ ರಾಜಿ ಸಂಧಾನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ವಿನೋದ್ ರಾಜ್ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ‘ಇತ್ತೀಚೆಗೆ ಜೈಲಿನಲ್ಲಿ ನಾನು ದರ್ಶನ್ ಅವರನ್ನು ಭೇಟಿ ಮಾಡಿದ್ದೆ. ಇದಾದ ಎರಡು ದಿನಗಳ ಬಳಿಕ ರೇಣುಕಾ ಸ್ವಾಮಿ ಅವರ ಕುಟುಂಬವನ್ನು ಭೇಟಿ ಮಾಡಿದೆ. ನಾನು ರಾಜಿ ಸಂಧಾನ ಮಾಡೋಕೆ ಹೋಗಿದ್ದೇನೆ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ದರ್ಶನ್ ಅವರನ್ನು ಓರ್ವ ಕಲಾವಿದ ಎಂಬ ಕಾರಣಕ್ಕೆ ಭೇಟಿ ಮಾಡಿದೆ. ಅಲ್ಲಿ ಏಕೆ ಹೋದೆ ಎಂದರೆ ರೇಣುಕಾ ಸ್ವಾಮಿ ಪತ್ನಿ ಗರ್ಭಿಣಿ. ಹುಟ್ಟುವ ಮಗುವಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಹೋದೆ. ನಮ್ಮಿಂದಾದ ಸಣ್ಣ ಕಾಣಿಕೆ ನೀಡಿದ್ದೇವೆ. ರಾಜಿ ಸಂಧಾನದ ರೀತಿಯ ಕೆಲಸವನ್ನು ನಾವು ಮಾಡುವಂಥವರಲ್ಲ’ ಎಂದಿದ್ದಾರೆ ವಿನೋದ್ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.