HMD Crest: ನೋಕಿಯಾ ಮೊಬೈಲ್ ಕಂಪನಿಯಿಂದ ಹೊಸ ಸರಣಿ ಸ್ಮಾರ್ಟ್​​ಫೋನ್ ಬಂದಿದೆ

HMD Crest: ನೋಕಿಯಾ ಮೊಬೈಲ್ ಕಂಪನಿಯಿಂದ ಹೊಸ ಸರಣಿ ಸ್ಮಾರ್ಟ್​​ಫೋನ್ ಬಂದಿದೆ

ಕಿರಣ್​ ಐಜಿ
|

Updated on: Jul 29, 2024 | 11:31 AM

ಎಚ್​ಎಂಡಿ ಸ್ಮಾರ್ಟ್​ಫೋನ್ ಸರಣಿಯಲ್ಲಿ ಹೊಸದಾಗಿ ಎಚ್​ಎಂಡಿ ಕ್ರೆಸ್ಟ್ ಮತ್ತು ಎಚ್​ಎಂಡಿ ಕ್ರೆಸ್ಟ್​ ಮ್ಯಾಕ್ಸ್ 5G ಬಿಡುಗಡೆಯಾಗಿದೆ. ನೂತನ ಸರಣಿಯ ಫೋನ್​ಗಳ ಕುರಿತು ಹೆಚ್ಚಿನ ಡೀಟೆಲ್ಸ್ ಇಲ್ಲಿದೆ.

ನೋಕಿಯಾ ಕಂಪನಿಯನ್ನು ಎಚ್ಎಂಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮುಂದೆ ಹೊಸ ಸ್ಮಾರ್ಟ್​​ಫೋನ್ ಸರಣಿಯಲ್ಲಿ ನೋಕಿಯಾ ಬದಲು ಎಚ್​ಎಂಡಿ ಫೋನ್​ಗಳೇ ಮಾರುಕಟ್ಟೆಗೆ ಲಗ್ಗೆ ಇರಿಸಲಿದೆ. ಈಗಾಗಲೇ ನೋಕಿಯಾ ಬೇಸಿಕ್ ಫೋನ್ ಫೀಚರ್ ಸರಣಿ ಬದಲು HMD 105, HMD 110 ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಐಕಾನಿಕ್ ವಿನ್ಯಾಸದ ನೋಕಿಯಾ ಫೋನ್ ಕ್ರಮೇಣ ಗ್ಯಾಜೆಟ್ ಲೋಕದಲ್ಲಿ ಕಣ್ಮರೆಯಾಗಲಿದೆ. ಈ ಬಾರಿ ಎಚ್​ಎಂಡಿ ಸ್ಮಾರ್ಟ್​ಫೋನ್ ಸರಣಿಯಲ್ಲಿ ಹೊಸದಾಗಿ ಎಚ್​ಎಂಡಿ ಕ್ರೆಸ್ಟ್ ಮತ್ತು ಎಚ್​ಎಂಡಿ ಕ್ರೆಸ್ಟ್​ ಮ್ಯಾಕ್ಸ್ 5G ಬಿಡುಗಡೆಯಾಗಿದೆ. ನೂತನ ಸರಣಿಯ ಫೋನ್​ಗಳ ಕುರಿತು ಹೆಚ್ಚಿನ ಡೀಟೆಲ್ಸ್ ಇಲ್ಲಿದೆ.