Loading video

ಕಣ್ಣೀರು ಹಾಕುತ್ತಲೇ ಲೀಲಮ್ಮನ ಪೋಟೋಗೆ ವಿನೋದ್ ಪೂಜೆ; ಇಲ್ಲಿದೆ ಭಾವುಕ ಕ್ಷಣ

|

Updated on: Dec 08, 2023 | 10:10 PM

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ(Leelavathi) ಅವರು ಇಂದು ಸಾಯಂಕಾಲ ನಿಧನರಾಗಿದ್ದಾರೆ. ಈ ಹಿನ್ನಲೆ ಮನೆಯಲ್ಲಿ ನಿರವ ಮೌನ ಮೂಡಿದ್ದು, ಮನೆಯ ಸಿಬ್ಬಂದಿಗಳು ಸೇರಿದಂತೆ ಇಡೀ ಚಿತ್ರರಂಗ ಶೋಕಸಾಗರದಲ್ಲಿ ಮೂಳಗಿದೆ. ಈ ವೇಳೆ ಲೀಲಾವತಿಯವರ ಮಗನಾದ ವಿನೋದ್​ ರಾಜ್​ ಮನೆಯಲ್ಲಿ ತಾಯಿಯ ಭಾವ ಚಿತ್ರವಿಟ್ಟು ಕಣ್ಣೀರು ಹಾಕುತ್ತಲೇ ಪೂಜೆ ಪೊಜೆ ಸಲ್ಲಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ(Leelavathi) ಅವರು ಇಂದು ಸಾಯಂಕಾಲ ನಿಧನರಾಗಿದ್ದಾರೆ. ಈ ಹಿನ್ನಲೆ ಮನೆಯಲ್ಲಿ ನಿರವ ಮೌನ ಮೂಡಿದ್ದು, ಮನೆಯ ಸಿಬ್ಬಂದಿಗಳು ಸೇರಿದಂತೆ ಇಡೀ ಚಿತ್ರರಂಗ ಶೋಕಸಾಗರದಲ್ಲಿ ಮೂಳಗಿದೆ. ಈ ವೇಳೆ ಲೀಲಾವತಿಯವರ ಮಗನಾದ ವಿನೋದ್​ ರಾಜ್​ ಮನೆಯಲ್ಲಿ ತಾಯಿಯ ಭಾವ ಚಿತ್ರವಿಟ್ಟು ಕಣ್ಣೀರು ಹಾಕುತ್ತಲೇ ಪೂಜೆ ಪೊಜೆ ಸಲ್ಲಿಸಿದ್ದಾರೆ. ಸುಮಾರು 30 ವರ್ಷಗಳಿಂದ ಸೋಲದೇವನಹಳ್ಳಿ ಮನೆಯಲ್ಲಿ ಲೀಲಾವತಿ ಅವರು ವಾಸವಿದ್ದರು. ಲೀಲಾವತಿಗಾಗಿ ಅವರ ನೆಚ್ಚಿನ ಬ್ಲ್ಯಾಕಿ ನಾಯಿ ಬಾಗಿಲಲ್ಲಿ ಕಾಯುತ್ತಿದೆ. ಇನ್ನು ಈಗಾಗಲೇ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಜೆಸಿಬಿಯಿಂದ ಮನೆಯ ಮುಂಭಾಗದಲ್ಲಿರುವ ಜಮೀನು ಕ್ಲೀನ್ ಮಾಡಿಸಲಾಗುತ್ತಿದೆ. ಜೊತೆಗೆ ನಾಳೆ ಬರುವಂತಹ ಗಣ್ಯರಿಗಾಗಿ ಪಾರ್ಕಿಂಗ್ ವ್ಯವಸ್ಥೆಗಾಗಿ ಸಿದ್ಧತೆ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ