ಕಾವೇರಿ ಹೋರಾಟದ ಬಗ್ಗೆ ವಿನೋದ್ ರಾಜ್​ ದಿಟ್ಟ ಮಾತು

|

Updated on: Sep 24, 2023 | 3:41 PM

Vinod Raj: ನಟ, ರೈತ ವಿನೋದ್ ರಾಜ್, ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದು, ನೀರಿದ್ದರೆ ಎಲ್ಲ. ನೀರೇ ಇಲ್ಲದಿದ್ದಲ್ಲೆ ರೈತ ಏನು ಮಾಡುವುದು. ಕಾವೇರಿ ಹೋರಾಟವನ್ನು ದಿಗ್ಗಜರು ಮಾಡಿಕೊಂಡು ಬಂದಿದ್ದಾರೆ. ಅದು ಮುಂದುವರೆಯಬೇಕು ಎಂದಿದ್ದಾರೆ.

ನಟ ವಿನೋದ್ ರಾಜ್ (Vinod Raj), ಚಿತ್ರರಂಗದಿಂದ ದೂರಾಗಿ ತಾಯಿ ಲೀಲಾವತಿ ಅವರೊಟ್ಟಿಗೆ ನೆಲಮಂಗಲದ ಹಳ್ಳಿಯಲ್ಲಿ ರೈತ ಬದುಕು ಬದುಕುತ್ತಿದ್ದಾರೆ. ನಿನ್ನೆ (ಸೆಪ್ಟೆಂಬರ್ 23) ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಭಾಗವಹಿಸಲು ತಾಯಿಯೊಟ್ಟಿಗೆ ಬಂದಿದ್ದ ವಿನೋದ್, ಮತದಾನದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ಕಾವೇರಿ ವಿವಾದದ ಬಗ್ಗೆ ಮಾತನಾಡಿದರು. ಕಾವೇರಿ ಹೋರಾಟಕ್ಕೆ ಚಿತ್ರರಂಗ ಸದಾ ಬೆಂಬಲಿಸುತ್ತಾ ಬಂದಿದೆ. ಹಲವು ದಿಗ್ಗಜರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಅವಶ್ಯಕವಿದೆ ಎನಿಸಿದರೆ ಮತ್ತೊಮ್ಮೆ ಹೋರಾಟಕದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ