Video: ಆಂಜನೇಯನ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕಿದ್ದ ನಾಯಿ ಈಗ ದೇವರು
ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನಾಯಿಯೊಂದು ಆಂಜನೇಯ ವಿಗ್ರಹದ ಸುತ್ತ 20ಕ್ಕೂ ಹೆಚ್ಚು ಬಾರಿ ಪ್ರದಕ್ಷಿಣೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ನಾಯಿಯೇ ದೇವರಾಗಿದೆ. ಭಕ್ತರು ದೇವರ ಜತೆ ನಾಯಿಯನ್ನೂ ಪೂಜಿಸಲು ಶುರು ಮಾಡಿದ್ದಾರೆ ನಗೀನಾ ಪ್ರದೇಶದಲ್ಲಿರುವ ನಂದಪುರ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ವಿಗ್ರಹದ ಸುತ್ತ ನಾಯಿಯ ಪ್ರದಕ್ಷಿಣೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದವು.
ಲಕ್ನೋ, ಜನವರಿ 18: ಆಂಜನೇಯನ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕಿದ್ದ ನಾಯಿ ಈಗ ಊರಿಗೇ ದೇವರು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನಾಯಿಯೊಂದು ಆಂಜನೇಯ ವಿಗ್ರಹದ ಸುತ್ತ 20ಕ್ಕೂ ಹೆಚ್ಚು ಬಾರಿ ಪ್ರದಕ್ಷಿಣೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ನಾಯಿಯೇ ದೇವರಾಗಿದೆ. ಭಕ್ತರು ದೇವರ ಜತೆ ನಾಯಿಯನ್ನೂ ಪೂಜಿಸಲು ಶುರು ಮಾಡಿದ್ದಾರೆ ನಗೀನಾ ಪ್ರದೇಶದಲ್ಲಿರುವ ನಂದಪುರ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ವಿಗ್ರಹದ ಸುತ್ತ ನಾಯಿಯ ಪ್ರದಕ್ಷಿಣೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದವು.
ಸ್ಥಳೀಯರ ಪ್ರಕಾರ, ನಾಯಿ ಸೋಮವಾರ ಮುಂಜಾನೆ ಮೊದಲು ದೇವಸ್ಥಾನದಲ್ಲಿ ಕಾಣಿಸಿಕೊಂಡು ಹನುಮಂತನ ವಿಗ್ರಹದ ಸುತ್ತಲೂ ನಿರಂತರವಾಗಿ ನಡೆಯಲು ಪ್ರಾರಂಭಿಸಿತು. ಈ ನಡವಳಿಕೆಯು ಗಂಟೆಗಳ ಕಾಲ ಮುಂದುವರೆಯಿತು.
ಬಳಿಕ ನಾಯಿ ದುರ್ಗಾದೇವಿಯ ವಿಗ್ರಹದ ಕಡೆಗೆ ಹೋಯಿತು, ಅದೇ ರೀತಿ ಪ್ರದಕ್ಷಿಣೆ ಹಾಕಿತ್ತು. ಕಳವಳಗೊಂಡ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದರು, ನಂತರ ಪಶುವೈದ್ಯಕೀಯ ತಂಡವು ನಾಯಿಯನ್ನು ಪರೀಕ್ಷಿಸಿತು ಯಾವುದೇ ಗಾಯಗಳಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ