Video: ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಸಿಎಂ ಯೋಗಿ ಬಳಿ ಪುಟ್ಟ ಪೋರಿಯ ಮನವಿ

Updated on: Jun 24, 2025 | 9:09 AM

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಲು ಜನತಾ ದರ್ಬಾರ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಲ್ಲಿಗೆ ಬಂದಿದ್ದ ಐದು ವರ್ಷದ ಪೋರಿಯೊಂದು ಯೋಗಿ ಬಳಿ ತನ್ನನ್ನು ಶಾಲೆಗೆ ಸೇರಿಸುವಂತೆ ಮನವಿ ಮಾಡಿದ್ದಳು. ಸಾಕಷ್ಟು ಮಂದಿ ತಮ್ಮ ಸಮಸ್ಯೆಗಳನ್ನು ಹೊತ್ತು ಸಿಎಂ ಬಗ್ಗೆ ಭರವಸೆ ಇಟ್ಟು ಅಲ್ಲಿಗೆ ಬಂದಿದ್ದರು.

ಲಕ್ನೋ, ಜೂನ್ 24: ಪ್ಲೀಸ್ ನನ್ನನ್ನು ಶಾಲೆಗೆ ಸೇರಿಸ್ತೀರಾ? ಇದು ಪುಟ್ಟ ಪೋರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮಾಡಿರುವ ಮನವಿ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಲು ಜನತಾ ದರ್ಬಾರ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಲ್ಲಿಗೆ ಬಂದಿದ್ದ ಐದು ವರ್ಷದ ಪೋರಿಯೊಂದು ಯೋಗಿ ಬಳಿ ತನ್ನನ್ನು ಶಾಲೆಗೆ ಸೇರಿಸುವಂತೆ ಮನವಿ ಮಾಡಿದ್ದಳು. ಸಾಕಷ್ಟು ಮಂದಿ ತಮ್ಮ ಸಮಸ್ಯೆಗಳನ್ನು ಹೊತ್ತು ಸಿಎಂ ಬಗ್ಗೆ ಭರವಸೆ ಇಟ್ಟು ಅಲ್ಲಿಗೆ ಬಂದಿದ್ದರು.

ಯೋಗಿ ತಮಾಷೆಯಿಂದ ಬಾಲಕಿ ಬಳಿ ನಿನನಗೆ ಶಾಲೆಗೆ ಹೋಗೋದಂದ್ರೆ ಇಷ್ಟ ಇಲ್ಲ ಅಲ್ವಾ ಎಂದು ಕೇಳ್ತಾರೆ ಆಗ ಆಕೆ ಇಲ್ಲಾ ನನಗೆ ಶಾಲೆಗೆ ಹೋಗೋದು ಅಂದ್ರೆ ತುಂಬಾ ಇಷ್ಟ ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ನೀನು ಯಾವ ತರಗತಿಗೆ ಸೇರುತ್ತೀಯಾ ಎಂದು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಈ ಉತ್ತರ ಕೇಳಿ ಎಲ್ಲರೂ ನಗುತ್ತಾರೆ. ಸಿಎಂ ಯೋಗಿ ಗೋರಖ್‌ಪುರದಲ್ಲಿದ್ದರೆ, ಅವರು ಗೋರಖ್‌ನಾಥ್ ದೇವಾಲಯದ ಆವರಣದಲ್ಲಿ ಜನತಾ ದರ್ಬಾರ್ ಆಯೋಜಿಸುತ್ತಾರೆ.  ಬಾಲಕಿಯ ಮನವಿಗೆ ಸ್ಪಂದಿಸಿ ಮಗುವನ್ನು ಶಾಲೆಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ