Video: ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ; ವಿಡಿಯೋ ವೈರಲ್
ಬುರ್ಖಾ ಧರಿಸಿ ಚಿನ್ನದ ಅಂಗಡಿಗೆ ನುಗ್ಗಿದ ಮಹಿಳೆಯೊಬ್ಬಳು, ಗ್ರಾಹಕಿಯಂತೆ ನಟಿಸಿ ಮಾಲೀಕ ಮತ್ತು ಸಿಬ್ಬಂದಿ ಕಣ್ಣಿಗೆ ಖಾರಪುಡಿ ಎರಚಿ ಆಭರಣ ದರೋಡೆಗೆ ಯತ್ನಿಸಿದ್ದಾಳೆ. ಆಭರಣಗಳನ್ನು ನೋಡುವ ನೆಪದಲ್ಲಿ ಹೊಂಚು ಹಾಕಿದ್ದ ಈ ಕೃತ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ಘಟನೆಯ ದೃಶ್ಯಾವಳಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬುರ್ಖಾ ಧರಿಸಿ ಗ್ರಾಹಕಿಯಂತೆ ಚಿನ್ನದ ಅಂಗಡಿಗೆ ನುಗ್ಗಿದ ಮಹಿಳೆಯೊಬ್ಬಳು, ಮಾಲೀಕ ಮತ್ತು ಸಿಬ್ಬಂದಿಯ ಕಣ್ಣಿಗೆ ಖಾರಪುಡಿ ಎರಚಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಆಭರಣಗಳನ್ನು ನೋಡುವ ನೆಪದಲ್ಲಿ ಹೊಂಚು ಹಾಕಿದ್ದ ಈ ಕಿರಾತಕಿ, ತನ್ನ ಬಳಿಯಿದ್ದ ಖಾರದಪುಡಿಯನ್ನು ಅವರ ಕಣ್ಣಿಗೆ ಎಸೆದು ಆಭರಣಗಳನ್ನು ಎಗರಿಸಲು ಯತ್ನಿಸಿದ್ದಾಳೆ. ಈ ಇಡೀ ದರೋಡೆ ಯತ್ನದ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ!
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

