Video: ಮಗುವನ್ನು ಆಟೋದಲ್ಲಿ ಕೂರಿಸಿ ಬಾರ್‌ಗೆ ಕುಡಿಯಲು ಹೋದ ಮಹಿಳೆ
ಮಗುವನ್ನು ಆಟೋದಲ್ಲಿ ಕೂರಿಸಿ ತಾಯಿಯೊಬ್ಬಳು ಹತ್ತಿರದ ಬಾರ್‌ಗೆ ಕುಡಿಯಲು ಹೋಗಿದ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಇ-ಆಟೋದಲ್ಲಿ ತನ್ನ 4 ವರ್ಷದ ಮಗನನ್ನು ಕೂರಿಸಿ ಆಕೆ ಬಾರ್‌ಗೆ ಕುಡಿಯಲು ಹೋಗಿದ್ದಳು. ಪೊಲೀಸ್ ಸಿಬ್ಬಂದಿ ಬಾಲಕನನ್ನು ಗಮನಿಸಿದ್ದಾರೆ ಮತ್ತು ಸುರಕ್ಷಿತವಾಗಿ ಬಾಲಕನನ್ನು ಮನೆಗೆ ಸೇರಿಸಿದ್ದಾರೆ. ಮಹಿಳೆ ತನ್ನ ಮಗನೊಂದಿಗೆ ಇ-ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಮತ್ತು ಹತ್ತಿರದ ಬಾರ್‌ಗೆ ಹೋಗುವಾಗ ಮಗುವಿನೊಂದಿಗೆ ಕಾಯಲು ಚಾಲಕನನ್ನು ಕೇಳಿಕೊಂಡಿದ್ದಳು. ಮಗುವಿನ ಸುರಕ್ಷತೆಯ ಬಗ್ಗೆ ಕಳವಳಗೊಂಡ ಇ-ರಿಕ್ಷಾ ಚಾಲಕ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದರು.
ಗುರುಗ್ರಾಮ, ಡಿಸೆಂಬರ್ 28: ಮಗುವನ್ನು ಆಟೋದಲ್ಲಿ ಕೂರಿಸಿ ತಾಯಿಯೊಬ್ಬಳು ಹತ್ತಿರದ ಬಾರ್‌ಗೆ ಕುಡಿಯಲು ಹೋಗಿದ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಇ-ಆಟೋದಲ್ಲಿ ತನ್ನ 4 ವರ್ಷದ ಮಗನನ್ನು ಕೂರಿಸಿ ಆಕೆ ಬಾರ್‌ಗೆ ಕುಡಿಯಲು ಹೋಗಿದ್ದಳು. ಪೊಲೀಸ್ ಸಿಬ್ಬಂದಿ ಬಾಲಕನನ್ನು ಗಮನಿಸಿದ್ದಾರೆ ಮತ್ತು ಸುರಕ್ಷಿತವಾಗಿ ಬಾಲಕನನ್ನು ಮನೆಗೆ ಸೇರಿಸಿದ್ದಾರೆ. ಮಹಿಳೆ ತನ್ನ ಮಗನೊಂದಿಗೆ ಇ-ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಮತ್ತು ಹತ್ತಿರದ ಬಾರ್‌ಗೆ ಹೋಗುವಾಗ ಮಗುವಿನೊಂದಿಗೆ ಕಾಯಲು ಚಾಲಕನನ್ನು ಕೇಳಿಕೊಂಡಿದ್ದಳು. ಮಗುವಿನ ಸುರಕ್ಷತೆಯ ಬಗ್ಗೆ ಕಳವಳಗೊಂಡ ಇ-ರಿಕ್ಷಾ ಚಾಲಕ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದರು.
ಪೊಲೀಸ್ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿ ಅಲ್ಲಿಗೆ ಬಂದು ವಿಚಾರಣೆ ನಡೆಸಿದ್ದಾರೆ.ಪೊಲೀಸ್ ಅಧಿಕಾರಿಗಳು ಮಗುವನ್ನು ಮಹಿಳೆಗೆ ಹಸ್ತಾಂತರಿಸುವ ಮೊದಲು ಮಹಿಳೆಯೊಂದಿಗೆ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಕೆ ಕಂಠಪೂರ್ತಿ ಕುಡಿದಿದ್ದಳು. ಇ-ರಿಕ್ಷಾ ಚಾಲಕನ ಜಾಗರೂಕತೆ ಮತ್ತು ಪೊಲೀಸರ ತ್ವರಿತ ಪ್ರತಿಕ್ರಿಯೆಯನ್ನು ಹಲವರು ಶ್ಲಾಘಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ