Video: ಬೈಕ್ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದ ಸವಾರ
ಯುವಕನೊಬ್ಬ ಬೈಕ್ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ರೀಲ್ಸ್ಗಾಗಿ ಅಪಾಯಕಾರಿ ಸಾಹಸ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋದಲ್ಲಿ ಬಸ್ ಚಲಿಸುತ್ತಿರುತ್ತದೆ ಆಗ ಬಲಗಡೆಯಿಂದ ಬಂದ ಬೈಕ್ ಸವಾರ ಚಾಲಕ ಕುಳಿತಿರುವಲ್ಲಿ ಇರುವ ಬಾಗಿಲನ್ನು ಅಚಾನಕ್ಕಾಗಿ ತೆರೆಯುತ್ತಾನೆ.
ನವದೆಹಲಿ, ಫೆಬ್ರವರಿ 18: ಯುವಕನೊಬ್ಬ ಬೈಕ್ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ರೀಲ್ಸ್ಗಾಗಿ ಅಪಾಯಕಾರಿ ಸಾಹಸ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋದಲ್ಲಿ ಬಸ್ ಚಲಿಸುತ್ತಿರುತ್ತದೆ ಆಗ ಬಲಗಡೆಯಿಂದ ಬಂದ ಬೈಕ್ ಸವಾರ ಚಾಲಕ ಕುಳಿತಿರುವಲ್ಲಿ ಇರುವ ಬಾಗಿಲನ್ನು ಅಚಾನಕ್ಕಾಗಿ ತೆರೆಯುತ್ತಾನೆ.
ಕೂಡಲೇ ಚಾಲಕ ಬಾಗಿಲು ಹಾಕಿಕೊಳ್ಳುತ್ತಾರೆ. ಒಂದೊಮ್ಮೆ ಡ್ರೈವರ್ ಪ್ಯಾನಿಕ್ ಆಗಿದ್ದರೆ ಅಪಘಾತವಾಗುವ ಸಂಭವವಿತ್ತು. ಬೈಕ್ಗೆ ನಂಬರ್ ಪ್ಲೇಟ್ ಕೂಡಾ ಇರಲಿಲ್ಲ. ಆರೋಪಿಯನ್ನು ಖಜುರಿ ಖಾಸ್ ನಿವಾಸಿ ತುಷಾರ್ ಪುನಿಯಾ ಎಂದು ಗುರುತಿಸಲಾಗಿದೆ. ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು


