ಸೌದಿ ಅರೇಬಿಯಾ: ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಸೌದಿ ಅರೇಬಿಯಾದ ಮದೀನಾದಲ್ಲಿರುವ ಪ್ರವಾದಿಯ ಮಸೀದಿ ಎಂದು ಕರೆಯಲ್ಪಡುವ ಮಸ್ಜಿದ್ ಅನ್-ನಬವಿಯಲ್ಲಿ ಭದ್ರತಾ ಅಧಿಕಾರಿಯ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸುತ್ತಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಸೀದಿಯ ನಿರ್ಬಂಧಿತ ಜಾಗಕ್ಕೆ ಹೋಗುವುದನ್ನು ತಡೆಯಲು ಪ್ರಯತ್ನಿಸುತ್ತಿರುವ ಭದ್ರತಾ ಅಧಿಕಾರಿಗೆ ಮಹಿಳೆ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬುರ್ಖಾ ಧರಿಸಿದ ಮಹಿಳೆ ವೇಗವಾಗಿ ನಡೆಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದಕ್ಕೆ ಅವರ ಮೇಲೆ ಕೈ ಮಾಡಿದ್ದಾಳೆ. ತಿರುಗಿ ಭದ್ರತಾ ಸಿಬ್ಬಂದಿ ಕೂಡ ಅಕೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಸೌದಿ ಅರೇಬಿಯಾ, ಮಾರ್ಚ್ 31: ಸೌದಿ ಅರೇಬಿಯಾದ ಮದೀನಾದಲ್ಲಿರುವ ಪ್ರವಾದಿಯ ಮಸೀದಿ ಎಂದು ಕರೆಯಲ್ಪಡುವ ಮಸ್ಜಿದ್ ಅನ್-ನಬವಿಯಲ್ಲಿ ಭದ್ರತಾ ಅಧಿಕಾರಿಯ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸುತ್ತಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಸೀದಿಯ ನಿರ್ಬಂಧಿತ ಜಾಗಕ್ಕೆ ಹೋಗುವುದನ್ನು ತಡೆಯಲು ಪ್ರಯತ್ನಿಸುತ್ತಿರುವ ಭದ್ರತಾ ಅಧಿಕಾರಿಗೆ ಮಹಿಳೆ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬುರ್ಖಾ ಧರಿಸಿದ ಮಹಿಳೆ ವೇಗವಾಗಿ ನಡೆಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದಕ್ಕೆ ಅವರ ಮೇಲೆ ಕೈ ಮಾಡಿದ್ದಾಳೆ. ತಿರುಗಿ ಭದ್ರತಾ ಸಿಬ್ಬಂದಿ ಕೂಡ ಅಕೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 31, 2025 09:49 AM