ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ?: ಬೌಲಿಂಗ್ ಮಾಡುತ್ತಿದ್ದಾರೆ ಕೊಹ್ಲಿ, ಗಿಲ್, ಸೂರ್ಯ
Team India Practice, IND vs ENG World Cup: ಪ್ರ್ಯಾಕ್ಟೀಸ್ ಸೆಷನ್ನಲ್ಲಿ ವಿರಾಟ್ ಕೊಹ್ಲಿ, ಗಿಲ್ ಹಾಗೂ ಸೂರ್ಯಕುಮಾರ್ ಬೌಲಿಂಗ್ ಅಭ್ಯಾಸ ನಡೆಸಿದರು. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಕೊಹ್ಲಿ, ಗಿಲ್ ಅಥವಾ ಸೂರ್ಯ ಅವರನ್ನು ಯನ್ನು ಅರೆಕಾಲಿಕ ಬೌಲಿಂಗ್ ಆಯ್ಕೆಗಾಗಿ ಸಿದ್ಧಪಡಿಸುವಂತೆ ಕಾಣುತ್ತಿದೆ.
ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ರ (ICC ODI World Cup) ಮೊದಲ ಐದು ಪಂದ್ಯಗಳಲ್ಲಿ ಐದನ್ನೂ ಗೆದ್ದಿರುವ ಭಾರತವು ತನ್ನ ಆರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಭಾನುವಾರ (ಅಕ್ಟೋಬರ್ 29) ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ವಿಶೇಷ ಎಂದರೆ, ಪ್ರ್ಯಾಕ್ಟೀಸ್ ಸೆಷನ್ನಲ್ಲಿ ವಿರಾಟ್ ಕೊಹ್ಲಿ ಅವರು ನಾಯಕ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡಿದರು. ಅಲ್ಲದೆ ಬ್ಯಾಟರ್ ಶುಭಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಕೂಡ ಬೌಲಿಂಗ್ ಅಭ್ಯಾಸ ನಡೆಸಿದರು. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಕೊಹ್ಲಿ, ಗಿಲ್ ಅಥವಾ ಸೂರ್ಯ ಅವರನ್ನು ಅರೆಕಾಲಿಕ ಬೌಲಿಂಗ್ ಆಯ್ಕೆಗಾಗಿ ಸಿದ್ಧಪಡಿಸುವಂತೆ ಕಾಣುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ