ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿಯಿರುವ ಅಭಿಮಾನ್ ಸ್ಟುಡಿಯೋದ ಒಳಗೆ ಪ್ರವೇಶ ಮಾಡಲು ವಿಷ್ಣುವರ್ಧನ್ ಅಭಿಮಾನಿಗಳಿಗೆ ಅವಕಾಶ ನಿರಾಕರಿಸುವ ಬಗ್ಗೆ ವಿಷ್ಣು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದು, ವಿಷ್ಣು ಸಮಾಧಿ ಸ್ಥಳಾಂತರವಾದರೆ ಹೆಣ ಬೀಳುತ್ತೆ ಎಂದಿದ್ದಾರೆ.
ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋನಲ್ಲಿ ಅಭಿಮಾನಿಗಳಿಗೆ ಪೂಜೆ ಮಾಡಲು ಅವಕಾಶ ನೀಡದೇ ಇರುವುದು ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಹಿತೈಶಿ ಡಾ.ವಿಷ್ಣುವರ್ಧನ್ ಬಳಗದ ಅಧ್ಯಕ್ಷ ಲೋಕೆಶ್ ಗೌಡ, ‘ಈ ಬಾರಿ ನಮ್ಮನ್ನ ಸ್ಮಾರಕದ ಪೂಜೆ ಮಾಡಲು ಒಳಗೆ ಬಿಡಲಿಲ್ಲ, ಕೋರ್ಟ್ ನಿಂದ ಇಂಜಕ್ಷನ್ ಆರ್ಡರ್ ತಂದಿದ್ರು ಬಾಲಣ್ಣ ಮೊಮ್ಮಗ ಕಾರ್ತಿಕ್. ತುಂಬಾ ನೋವಾಯ್ತು ಹೊರಗಡೆನೆ ಪೂಜೆ ಮಾಡಿ 3 ಸಾವಿರ ಜನಕ್ಕೆ ಅನ್ನದಾನ ವ್ಯವಸ್ಥೆ ಮಾಡಿಸಿದೆ. ಕನ್ಸಟ್ರಕ್ಷನ್ ಮಾಡಿಸೋದಕ್ಕೆ, ಈಗಾಗಲೇ ಬಾಲಕೃಷ್ಣ ಅವರ ಸಮಾಧಿಯನ್ನ ತೆರವು ಮಾಡಿದ್ದಾರೆ. ವಿಷ್ಣು ವರ್ಧನ್ ಸಮಾಧಿ ತೆರವು ಎನಾದ್ರು ಮಾಡಿದರೆ ಹೆಣ ಬಿಳುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದುವರೆದು, ‘ನಮಗೆ ಎರಡು ಎಕರೆ ಬೇಡ, ಒಂದು ಎಕರೆ ಕೊಡಲಿ ಸಾಕು ನಾವು ಅಭಿಮಾನಿಗಳು ಇನ್ನು ಬದುಕಿದ್ದೀವಿ ನಾವೇ ಎಲ್ಲ ತಂದು ಮಾಡ್ತಿವಿ ಸರ್ಕಾರ ಏನಾದರು ಮಾಡಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 20, 2024 09:48 PM