ರವಿ ಬೊಪಾರ ಬೊಂಬಾಟ್ ಬ್ಯಾಟಿಂಗ್: 40ನೇ ವಯಸ್ಸಿನಲ್ಲೂ ಸ್ಫೋಟಕ ಸೆಂಚುರಿ
Vitality Blast 2025: 14 ಓವರ್‌ಗಳಲ್ಲಿ 155 ರನ್ ಗಳ ಗುರಿ ಪಡೆದ ಸರ್ರೆ ಪರ ಒಲೀ ಪೋಪ್ 23 ಎಸೆತಗಳಲ್ಲಿ 41 ರನ್ ಬಾರಿಸಿದರೆ, ಸ್ಯಾಮ್ ಕರನ್ 38 ಎಸೆತಗಳಲ್ಲಿ 69 ರನ್ ಚಚ್ಚಿದರು. ಇದಾಗ್ಯೂ ಸರ್ರೆ ತಂಡ 14 ಓವರ್‌ಗಳಲ್ಲಿ 147 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ನಾರ್ಥಂಪ್ಟನ್ ಶೈರ್ ತಂಡ 7 ರನ್ ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ ಗೆ ಎಂಟ್ರಿಕೊಟ್ಟಿದೆ.
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಟಾಲಿಟಿ ಬ್ಲಾಸ್ಟ್ ಟಿ20 ಟೂರ್ನಿಯಲ್ಲಿ ರವಿ ಬೋಪರ ಸ್ಫೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ದಿ ಓವಲ್ ಮೈದಾನದಲ್ಲಿ ನಡೆದ ಈ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾರ್ಥಂಪ್ಟನ್ ಶೈರ್ ಹಾಗೂ ಸರ್ರೆ ತಂಡಗಳು ಮುಖಾಮುಖಿಯಾಗಿದ್ದವು.
ಮಳೆಯ ಕಾರಣ 14 ಓವರ್‌ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸರ್ರೆ ತಂಡವು ಮೊದಲು ಫೀಲ್ಡಿಂಗ್ ಮಾಡುವ ನಿರ್ಣಯ ತೆಗೆದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ನಾರ್ಥಂಪ್ಟನ್ ಶೈರ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಿಬ್ಬರು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದರು.
ಈ ಹಂತದಲ್ಲಿ ಕಣಕ್ಕಿಳಿದ ರವಿ ಬೋಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದ ಬೋಪರ ಸರ್ರೆ ಬೌಲರ್‌ಗಳ ಬೆಂಡೆತ್ತಿದರು. ಈ ಮೂಲಕ ಕೇವಲ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್ ಗಳೊಂದಿಗೆ ಅಜೇಯ 105 ರನ್ ಬಾರಿಸಿದರು. ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ನಾರ್ಥಂಪ್ಟನ್ ಶೈರ್ ತಂಡವು 14 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು.
14 ಓವರ್‌ಗಳಲ್ಲಿ 155 ರನ್ ಗಳ ಗುರಿ ಪಡೆದ ಸರ್ರೆ ಪರ ಒಲೀ ಪೋಪ್ 23 ಎಸೆತಗಳಲ್ಲಿ 41 ರನ್ ಬಾರಿಸಿದರೆ, ಸ್ಯಾಮ್ ಕರನ್ 38 ಎಸೆತಗಳಲ್ಲಿ 69 ರನ್ ಚಚ್ಚಿದರು. ಇದಾಗ್ಯೂ ಸರ್ರೆ ತಂಡ 14 ಓವರ್‌ಗಳಲ್ಲಿ 147 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ನಾರ್ಥಂಪ್ಟನ್ ಶೈರ್ ತಂಡ 7 ರನ್ ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ ಗೆ ಎಂಟ್ರಿಕೊಟ್ಟಿದೆ. ಇನ್ನು ಈ ಪಂದ್ಯದಲ್ಲಿ ಶತಕ ಸಿಡಿಸಿದ 40 ವರ್ಷದ ರವಿ ಬೋಪರ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

