NEET UG 2026: ಸೌದಿಯಲ್ಲಿ ಮಿಂಚಿದ ದಕ್ಷಿಣ ಕನ್ನಡದ ಪ್ರತಿಭೆ; ವಿದೇಶಿ ಕೆಟಗರಿಯಲ್ಲಿ ಅಯಾನ್ ಯೂಸುಫ್ ಟಾಪರ್

Updated on: Jul 18, 2026 | 10:36 AM

ನೀಟ್ 2026 ಪರೀಕ್ಷೆಯ ವಿದೇಶಿ ವಿಭಾಗದಲ್ಲಿ ದಕ್ಷಿಣ ಕನ್ನಡದ ವಿಟ್ಲ ಮೂಲದ ಮೊಹಮ್ಮದ್ ಅಯಾನ್ ಯೂಸುಫ್ ಕೊಳ್ನಾಡ್ ಶೇ 99.92ರಷ್ಟು ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಸೌದಿ ಅರೇಬಿಯಾದ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ಅಲ್-ಜುಬೈಲ್ ವಿದ್ಯಾರ್ಥಿಯಾಗಿರುವ ಅಯಾನ್, ತಮ್ಮ ಸಾಧನೆಯ ಮೂಲಕ ಸೌದಿ ಅರೇಬಿಯಾದಲ್ಲಿರುವ ಭಾರತೀಯ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ. ಈ ಮಹತ್ತರ ಸಾಧನೆಗಾಗಿ ಶಾಲೆ ಮತ್ತು ಕುಟುಂಬದವರು ಸಂಭ್ರಮಿಸಿದ್ದಾರೆ.

2026ರ ನೀಟ್ ಯುಜಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿದೇಶಿ ಕೆಟಗರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೂಲದ ಮೊಹಮ್ಮದ್ ಅಯಾನ್ ಯೂಸುಫ್ ಕೊಳ್ನಾಡ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಅಯಾನ್ ಶೇಕಡಾ 99.92ರಷ್ಟು ಅಂಕಗಳನ್ನು ಗಳಿಸಿ ಗಮನಾರ್ಹ ಶೈಕ್ಷಣಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸೌದಿ ಅರೇಬಿಯಾದ ಅಲ್-ಜುಬೈಲ್‌ನಲ್ಲಿರುವ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ವಿದ್ಯಾರ್ಥಿಯಾಗಿರುವ ಮೊಹಮ್ಮದ್ ಅಯಾನ್, ಈ ಸಾಧನೆಯ ಮೂಲಕ ಸೌದಿ ಅರೇಬಿಯಾದಲ್ಲಿನ ಭಾರತೀಯ ಸಮುದಾಯಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. ಅಯಾನ್ ಕೇವಲ ನೀಟ್ ಪರೀಕ್ಷೆಯಲ್ಲಿ ಮಾತ್ರವಲ್ಲದೆ, ಸಿಬಿಎಸ್‌ಇ 12ನೇ ತರಗತಿಯ ವಿಜ್ಞಾನ ವಿಭಾಗದಲ್ಲೂ ಟಾಪರ್ ಆಗುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದರು. ಅವರ ಈ ಉತ್ತಮ ಸಾಧನೆಗೆ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

 

 

Published on: Jul 18, 2026 09:15 AM
Loading...
Unable to load recommendations.
Follow Us