ಪ್ರವೀಣ್ ನೆಟ್ಟಾರು ಕೊಲೆ: ಬೆಳ್ಳಾರೆ, ಪುತ್ತೂರು, ಸುಳ್ಯ ಮತ್ತು ಕಡಬಗಳಲ್ಲಿ ಸ್ವಯಂಘೋಷಿತ ಬಂದ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 27, 2022 | 11:27 AM

ಸದರಿ ಊರುಗಳಲ್ಲಿ ಅಂಗಡಿ ಮುಂಗಟ್ಟು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ರಸ್ತೆಗಳ ಮೇಲೆ ಅತಿವಿರಳ ಸಂಖ್ಯೆಯಲ್ಲಿ ಜನ ತಿರುಗಾಡುತ್ತಿದ್ದಾರೆ.

ದಕ್ಷಿಣ ಕನ್ನಡ:  ಯುವ ಬೆಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಮಂಗಳವಾರ ರಾತ್ರಿ ಭೀಕರವಾಗಿ ಕೊಲೆಯಾದ ಹಿನ್ನೆಲೆಯಲ್ಲಿ ಬೆಳ್ಳಾರೆ. ಪುತ್ತೂರು, ಸುಳ್ಯ ಮತ್ತು ಕಡಬ (Kadaba) ಮೊದಲಾದ ಊರುಗಳಲ್ಲಿ ಸ್ವಯಂಘೋಷಿತ ಬಂದ್ (Bandh) ಆಚರಿಸಲಾಗುತ್ತಿದೆ. ಸದರಿ ಊರುಗಳಲ್ಲಿ ಅಂಗಡಿ ಮುಂಗಟ್ಟು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ರಸ್ತೆಗಳ ಮೇಲೆ ಅತಿವಿರಳ ಸಂಖ್ಯೆಯಲ್ಲಿ ಜನ ತಿರುಗಾಡುತ್ತಿದ್ದಾರೆ.