Video: ಭಾರತದ ಉಪರಾಷ್ಟ್ರಪತಿ ರಾಧಾಕೃಷ್ಣನ್ಗೆ ಆ ಹೆಸರಿಡಲು ಕಾರಣವೇನು? ಅವರ ತಾಯಿ ಹೇಳಿದ್ದೇನು?
ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಸಿಪಿ ರಾಧಾಕೃಷ್ಣನ್ ಅವರಿಗೆ ರಾಧಾಕೃಷ್ಣನ್ ಎಂದೇ ಹೆಸರಿಡಲು ಏನು ಕಾರಣ ಎಂಬುದನ್ನು ಅವರ ತಾಯಿ ಜಾನಕಿ ಅವರು ತಿಳಿಸಿದ್ದಾರೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾದಾಗ ನನ್ನ ಮಗ ರಾಧಾಕೃಷ್ಣನ್ ಹುಟ್ಟಿದ್ದರು. ಆಗ ಅವರಿಗೆ ರಾಧಾಕೃಷ್ಣನ್ ಎಂದು ಹೆಸರಿಟ್ಟೆ. ಆಗ ನನ್ನ ಪತಿ, ನೀನು ನಿನ್ನ ಮಗನನ್ನು ರಾಷ್ಟ್ರಪತಿ ಮಾಡ್ತೀಯಾ ಎಂದು ಕೇಳಿದ್ದರು.ಈಗ ನನ್ನ ಮಗ ಉಪರಾಷ್ಟ್ರಪತಿಯಾಗಿದ್ದಾರೆ. ನನಗೆ ಹೆಮ್ಮೆ ಇದೆ ಎಂದು ಜಾನಕಿ ಹೇಳಿದ್ದಾರೆ.
ನವದೆಹಲಿ, ಸೆಪ್ಟೆಂಬರ್ 12: ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಸಿಪಿ ರಾಧಾಕೃಷ್ಣನ್ ಅವರಿಗೆ ರಾಧಾಕೃಷ್ಣನ್ ಎಂದೇ ಹೆಸರಿಡಲು ಏನು ಕಾರಣ ಎಂಬುದನ್ನು ಅವರ ತಾಯಿ ಜಾನಕಿ ಅವರು ತಿಳಿಸಿದ್ದಾರೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾದಾಗ ನನ್ನ ಮಗ ರಾಧಾಕೃಷ್ಣನ್ ಹುಟ್ಟಿದ್ದರು.
ಆಗ ಅವರಿಗೆ ರಾಧಾಕೃಷ್ಣನ್ ಎಂದು ಹೆಸರಿಟ್ಟೆ. ಆಗ ನನ್ನ ಪತಿ, ನೀನು ನಿನ್ನ ಮಗನನ್ನು ರಾಷ್ಟ್ರಪತಿ ಮಾಡ್ತೀಯಾ ಎಂದು ಕೇಳಿದ್ದರು.ಈಗ ನನ್ನ ಮಗ ಉಪರಾಷ್ಟ್ರಪತಿಯಾಗಿದ್ದಾರೆ. ನನಗೆ ಹೆಮ್ಮೆ ಇದೆ ಎಂದು ಜಾನಕಿ ಹೇಳಿದ್ದಾರೆ. ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಅವರ ತಾಯಿ ನೀಡಿರುವ ಸಂದರ್ಶನವಿದು. ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ರಾಧಾಕೃಷ್ಣನ್ ಅವರು ಗೆಲುವು ಸಾಧಿಸಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ