ಸೌಂದರ್ಯ ಜಗದೀಶ್ ಪತ್ನಿ ವಿರುದ್ಧ ಗಂಭೀರ ಆರೋಪ; 10 ಕೋಟಿ ರೂ.ಗೆ ಇತ್ತು ಬೇಡಿಕೆ

Updated on: Sep 04, 2024 | 8:20 AM

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಬಿಸ್ನೆಸ್​ ಪಾರ್ಟ್ನರ್​ ವಿ.ಎಸ್. ಸುರೇಶ್, ಎಸ್.ಪಿ. ಹೊಂಬಣ್ಣ, ಎಸ್. ಸುಧೀಂದ್ರ ವಿರುದ್ಧ ಆರೋಪ ಕೇಳಿಬಂದಿತ್ತು. ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಈ ಮೂವರ ವಿರುದ್ಧ ಕೇಸ್​ ದಾಖಲಾಗಿತ್ತು. ಅದು ಖುಲಾಸೆಗೊಂಡಿದೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಈ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳ ಮೂಡಿದ್ದವು. ಅವರ ಸಾವಿಗೆ ಬಿಸ್ನೆಸ್ ಪಾರ್ಟ್ನರ್​ಗಳಾದ ವಿ.ಎಸ್. ಸುರೇಶ್, ಎಸ್.ಪಿ. ಹೊಂಬಣ್ಣ, ಎಸ್. ಸುಧೀಂದ್ರ ಕಾರಣ ಎಂದು ಕುಟುಂಬದವರು ಆರೋಪಿಸಿದ್ದರು. ಈ ಕೇಸ್ ಖುಲಾಸೆ ಆಗಿದೆ. ಈ ಬಗ್ಗೆ ವಿ.ಎಸ್​. ಸುರೇಶ್​ ಸುದ್ದಿಗೋಷ್ಠಿ ಕರೆದಿದ್ದರು. ‘ನಾವು ಅಣ್ಣ-ತಮ್ಮನ ರೀತಿ ಇದ್ದೆವು. ಕಷ್ಟಪಟ್ಟು ನಾವು ಆಸ್ತಿ ಮಾಡಿದ್ದೆವು. ಮೂರು ಜನಕ್ಕೆ ಸರಿಯಾದ ಪಾಲಿತ್ತು. ಮಣ್ಣು ಮಾಡುವಾಗ ನಾವು ಜೊತೆಗೆ ಇದ್ದೆವು. ಜಗದೀಶ್ ಅವರ ಪತ್ನಿ ರೇಖಾ ಅವರು ತಮ್ಮ ಹೆಸರಲ್ಲಿ ಎಲ್ಲವನ್ನೂ ರಿಜಿಸ್ಟರ್ ಮಾಡಿಕೊಂಡರು. ಮೇ 11ರಂದು ನಮ್ಮನ್ನು ಹೋಟೆಲ್​ಗೆ ಕರೆದರು. 10 ಕೋಟಿ ರೂಪಾಯಿ ಕೊಡಿ ಎಂದರು. ನಾವು ಕೊಡಲ್ಲ ಎಂದೆವು’ ಎಂದಿದ್ದಾರೆ ಸುರೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More