ದುಬೈನಿಂದ ಜೀವಂತ ಮರಳಿದ್ದೇ ಪವಾಡ: ಭಯಾನಕ ಅನುಭವ ಬಿಚ್ಚಿಟ್ಟ ಎಂಎಲ್ಸಿ ಭೋಜೇಗೌಡ
ದುಬೈನಿಂದ ಸುರಕ್ಷಿತವಾಗಿ ಮರಳಿದ ಎಂಎಲ್ಸಿ ಭೋಜೇಗೌಡರು ಅಲ್ಲಿನ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. ಇಸ್ರೇಲ್-ಇರಾನ್ ಸಂಘರ್ಷದ ವೇಳೆ ಬಾಂಬ್ ದಾಳಿ ಮತ್ತು ಯುದ್ಧದಂತಹ ವಾತಾವರಣದಿಂದ ತಾವು ಹಾಗೂ ತಮ್ಮ ಪತ್ನಿ ಜೀವಂತವಾಗಿ ಭಾರತಕ್ಕೆ ಮರಳುವ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರೂ ಆತಂಕದಲ್ಲಿದ್ದು, ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದಾಗ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 03: ದುಬೈನಿಂದ ಭಾರತಕ್ಕೆ ವಾಪಸ್ ಆಗಿರುವ ಎಂಎಲ್ಸಿ ಭೋಜೇಗೌಡರು, ಇಸ್ರೇಲ್-ಇರಾನ್ ಸಂಘರ್ಷದ ಕಾರಣದಿಂದ ಉಂಟಾದ ಆತಂಕಕಾರಿ ಪರಿಸ್ಥಿತಿಯ ಬಗ್ಗೆ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಜೀವಂತವಾಗಿ ಭಾರತಕ್ಕೆ ಮರಳುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಹೋಟೆಲ್‌ಗಳಲ್ಲಿ ಉಳಿಯಲು ಭಯದ ವಾತಾವರಣ ಇತ್ತು. ಪ್ರತಿಯೊಬ್ಬರೂ ಆತಂಕದಲ್ಲಿದ್ದರು. ವಿಮಾನ ಸುರಕ್ಷಿತವಾಗಿ ನಮ್ಮ ನೆಲದಲ್ಲಿ ಲ್ಯಾಂಡ್ ಆದಾಗ ಎಲ್ಲ ಪ್ರಯಾಣಿಕರೂ ಚಪ್ಪಾಳೆ ತಟ್ಟಿ ತಮ್ಮ ಸಂತಸ ವ್ಯಕ್ತಪಡಿಸಿರೋದಾಗಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Mar 03, 2026 02:33 PM
Follow Us
