Shivam Dube: ಭಾರತಕ್ಕೆ ಸಿಕ್ಕ ಮತ್ತೋರ್ವ ಯುವರಾಜ್: ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ವಿಡಿಯೋ ನೋಡಿ

|

Updated on: Jan 15, 2024 | 9:09 AM

India vs Afghanistan Second T20I: ಶಿವಂ ದುಬೆ ಅವರ ಅಮೋಘ ಆಟದ ಶೈಲಿಯನ್ನು ಕಂಡು ಅನೇಕರು ಇವರನ್ನು ಯುವರಾಜ್ ಸಿಂಗ್​ಗೆ ಹೋಲಿಸುತ್ತಿದ್ದಾರೆ. ಅಂದು ಟೀಮ್ ಇಂಡಿಯಾಕ್ಕೆ ಯುವಿ ನೀಡುತ್ತಿದ್ದ ಕೊಡುಗೆ ಇಂದು ದುಬೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅಲ್ಲದೆ ದುಬೆ ಅವರ ಬ್ಯಾಟಿಂಗ್ ಶೈಲಿ ಕೂಡ ಯುವಿ ಮಾದರಲ್ಲೇ ಇದೆ.

ಅಫ್ಘಾನಿಸ್ತಾನ ವಿರುದ್ಧದ ಎರಡೂ ಟಿ20 ಪಂದ್ಯದಲ್ಲಿ ಭಾರತ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಶಿವಂ ದುಬೆ (Shivam Dube) ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇಂದೋರ್​ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲೂ ಅಬ್ಬರಿಸಿದ ದುಬೆ 32 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 63 ರನ್ ಚಚ್ಚಿದರು. ಮೊದಲ ಟಿ20 ಯಲ್ಲಿ ಅಜೇಯ 60 ರನ್ ಸಿಡಿಸಿದ್ದರು. ಇದೀಗ ದುಬೆ ಅವರ ಅಮೋಘ ಆಟದ ಶೈಲಿಯನ್ನು ಕಂಡು ಅನೇಕರು ಇವರನ್ನು ಯುವರಾಜ್ ಸಿಂಗ್​ಗೆ ಹೋಲಿಸುತ್ತಿದ್ದಾರೆ. ಅಂದು ಟೀಮ್ ಇಂಡಿಯಾಕ್ಕೆ ಯುವಿ ನೀಡುತ್ತಿದ್ದ ಕೊಡುಗೆ ಇಂದು ದುಬೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅಲ್ಲದೆ ದುಬೆ ಅವರ ಬ್ಯಾಟಿಂಗ್ ಶೈಲಿ ಕೂಡ ಯುವಿ ಮಾದರಲ್ಲೇ ಇದ್ದು, ಇವರು ಸಿಡಿಸುವ ಸಿಕ್ಸರ್​ಗಳನ್ನು ಗಮನಿಸಿದರೆ ಇದು ಎದ್ದು ಕಾಣುತ್ತದೆ. ಟಿ20 ವಿಶ್ವಕಪ್ 2024 ಗಾಗಿ ಭಾರತದ ಸಿದ್ಧತೆಗಳು ಈಗಾಗಲೇ ನಡೆಯುತ್ತಿದ್ದು, ಪ್ರಸ್ತುತ ಸರಣಿಯು ಆಯ್ಕೆದಾರರನ್ನು ಗಮನ ಸೆಳೆಯಲು ದುಬೆಗೆ ಇದು ಉತ್ತಮ ವೇದಿಕೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ