Afghanistan Cricket Team
ಕೆಲವು ವರ್ಷಗಳ ಹಿಂದೆ ಕ್ರಿಕೆಟ್ ಶಿಶು ದೇಶ ಎನಿಸಿಕೊಳ್ಳುತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಇದೀಗ ಬಲಿಷ್ಠ ತಂಡವಾಗಿ ಬೆಳೆದಿದೆ. 19 ನೇ ಶತಮಾನದ ಮಧ್ಯಭಾಗದಿಂದ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಆಡಲಾಗುತ್ತದೆ. ಆದರೆ 21 ನೇ ಶತಮಾನದ ಆರಂಭದಲ್ಲಿ ಈ ತಂಡದ ಪ್ರಾಬಲ್ಯ ಹೆಚ್ಚಾಗ ತೊಡಗಿತು. ತಂಡದಲ್ಲಿ ಮೂಡಿಬಂದ ಪ್ರತಿಭಾವಂತ ಕ್ರಿಕೆಟಿಗರು ಈ ತಂಡವನ್ನು ಯಶಸ್ಸಿನೆಡೆಗೆ ಕೊಂಡೊಯ್ದಿದ್ದಾರೆ. ರಶೀದ್ ಖಾನ್ರಂತಹ ಸ್ಟಾರ್ ಕ್ರಿಕೆಟಿಗರು ತಮ್ಮ ಅಘಾದ ಪ್ರತಿಭೆಯಿಂದ ಇಂದು ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಛಾಪು ಮೂಡಿಸಿದ್ದಾರೆ. ಈ ಹಿಂದೆ ನಡೆದ 2023 ರ ಏಕದಿನ ವಿಶ್ವಕಪ್ನಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್ನಂತಹ ಬಲಿಷ್ಠ ತಂಡಗಳನ್ನು ಮಣಿಸುವಲ್ಲಿ ಅಫ್ಘಾನಿಸ್ತಾನ ತಂಡ ಯಶಸ್ವಿಯಾಗಿತ್ತು. ಆದರೆ ಈ ತಂಡಕ್ಕೆ ಇದುವರೆಗೆ ಯಾವುದೇ ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ದೊಡ್ಡ ಕೊರತೆಯಾಗಿದೆ.