AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: KRS ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷ, ನೀರಿನಲ್ಲಿ ಮರೆಯಾಗುತ್ತಿರುವ ದೃಶ್ಯ ಇಲ್ಲಿದೆ

ಮಂಡ್ಯ: KRS ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷ, ನೀರಿನಲ್ಲಿ ಮರೆಯಾಗುತ್ತಿರುವ ದೃಶ್ಯ ಇಲ್ಲಿದೆ

ಪ್ರಶಾಂತ್​ ಬಿ.
| Edited By: Rakesh Nayak Manchi|

Updated on: Jul 28, 2023 | 6:45 PM

Share

ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್​ಎಸ್ ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ತಮ್ಮ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿರುವುದನ್ನು ನೋಡಿದ ಅವುಗಳು ನೀರಿನಲ್ಲಿ ಮುಳುಗಿ ಮರೆಯಾಗಲು ಯತ್ನಿಸಿವೆ.

ಮಂಡ್ಯ, ಜುಲೈ 28: ಶ್ರೀರಂಗಪಟ್ಟಣ ತಾಲೂಕಿನ‌ಲ್ಲಿರುವ ಕೆಆರ್​ಎಸ್​ ಜಲಾಶಯದಲ್ಲಿ ನೀರು ನಾಯಿಗಳು (Water Dog) ಪ್ರತ್ಯಕ್ಷವಾಗಿವೆ. ತುಂಬುತ್ತಿರುವ ಡ್ಯಾಂನ ಹಿನ್ನೀರಿನಲ್ಲಿ ನೀರು ನಾಯಿಗಳು ಕಂಡು ಬಂದಿದ್ದು, ಕ್ಯಾಮರಾ ಕಂಡೊಡನೆ ನೀರಿನಲ್ಲಿ ಮರೆಯಾಗಿವೆ. ಈ ಪೈಕಿ ಒಂದು ನೀರು ನಾಯಿ, ನೀರಿನಲ್ಲಿ ಮುಳಗಿ ಮತ್ತೆ ಮೇಲೆ ಬಂದು ಕ್ಯಾಮರಾ ನೋಡುತ್ತಿರುವ ದೃಶ್ಯ ಕೂಡ ಕಂಡುಬಂದಿದೆ.

ವಿಡಿಯೋ ಸ್ಟೋರಿಗಳನ್ನು ಮತ್ತಷ್ಟು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Prashantha B
Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More