WCL 2025: ಪ್ರಪೋಸ್ ಮಾಡ್ತೀನಿ; ಲೈವ್ನಲ್ಲೇ ನಿರೂಪಕಿಗೆ ಶಾಕ್ ನೀಡಿದ WCL ಮಾಲೀಕ; ವಿಡಿಯೋ ನೋಡಿ
WCL live proposal: ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL)ನ ಎರಡನೇ ಸೀಸನ್ ದಕ್ಷಿಣ ಆಫ್ರಿಕಾದ ಗೆಲುವಿನೊಂದಿಗೆ ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಪಂದ್ಯಾವಳಿಯ ಮಾಲೀಕ ಹರ್ಷಿತ್ ತೋಮರ್ ಅವರು ಲೈವ್ ಕಾರ್ಯಕ್ರಮದಲ್ಲಿ ನಿರೂಪಕಿ ಕರಿಷ್ಮಾ ಕೊಟಕ್ ಅವರಿಗೆ ಪ್ರಪೋಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ನ ಎರಡನೇ ಸೀಸನ್ಗೆ ಅದ್ಧೂರಿ ತೆರೆ ಬಿದ್ದಿದೆ. ಭಾರತ-ಪಾಕಿಸ್ತಾನ ಪಂದ್ಯದ ವಿವಾದಗಳ ನಡುವೆಯೇ ಇಂಗ್ಲೆಂಡ್‌ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪ್ರಶಸ್ತಿಯನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಎಬಿ ಡಿವಿಲಿಯರ್ಸ್ ನಾಯಕತ್ವದ ಆಫ್ರಿಕಾ ತಂಡವು ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು. ಇದರೊಂದಿಗೆ 2ನೇ ಸೀಸನ್ಗೆ ತೆರೆಬಿದ್ದಿದ್ದು, ಇದೀಗ WCL ನ ಮಾಲೀಕರ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಲೀಗ್‌ನ ನಿರೂಪಕಿಗೆ ಲೈವ್ ಕಾರ್ಯಕ್ರಮದಲಿಯೇ ಪ್ರಪೋಸ್ ಮಾಡುವುದಾಗಿ ಹೇಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಆಗಸ್ಟ್ 2 ರ ಶನಿವಾರ WCL ಫೈನಲ್ ಪಂದ್ಯ ನಡೆದಿತ್ತು. ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ಪ್ರಶಸ್ತಿ ಪಂದ್ಯ ಪ್ರಾರಂಭವಾಗುವ ಮೊದಲು, ಪ್ರಸಿದ್ಧ ನಿರೂಪಕಿ ಕರಿಷ್ಮಾ ಕೊಟಕ್ ಕಾರ್ಯಕ್ರಮದ ಸಮಯದಲ್ಲಿ ಮೈದಾನದಲ್ಲಿ ಹಾಜರಿದ್ದರು. ಈ ಸಮಯದಲ್ಲಿ, ಅವರು WCL ಮಾಲೀಕ ಮತ್ತು ಸಿಇಒ ಹರ್ಷಿತ್ ತೋಮರ್ ಅವರೊಂದಿಗೆ ಲೀಗ್ ಬಗ್ಗೆ ಚರ್ಚಿಸುತ್ತಿದ್ದರು. ಕೊನೆಯಲ್ಲಿ, ಕರಿಷ್ಮಾ ಫೈನಲ್ ಮುಗಿದ ನಂತರ ತೋಮರ್ ಅವರನ್ನು ಹೇಗೆ ಆಚರಿಸುತ್ತೀರಿ ಎಂದು ಕೇಳಿದರು?
ತೋಮರ್ ನೀಡಿದ ಉತ್ತರ ಎಲ್ಲರನ್ನೂ ಬೆಚ್ಚಿಬೀಳಿಸಿತು. ತೋಮರ್, “ಇದೆಲ್ಲ ಮುಗಿದ ನಂತರ, ಬಹುಶಃ ನಾನು ನಿಮಗೆ ಪ್ರಪೋಸ್ ಮಾಡುತ್ತೇನೆ” ಎಂದು ಹೇಳಿದರು. ಇದನ್ನು ಹೇಳಿದ ನಂತರ, WCL ಮಾಲೀಕರು ನಗಲು ಪ್ರಾರಂಭಿಸಿ, ಅಲ್ಲಿಂದ ಹೊರಟುಹೋದರು. ಇತ್ತ ನಿರೂಪಕಿ ಕರಿಷ್ಮಾ ಅವರಿಗೆ ಏನು ಮಾತನಾಡಬೇಕು ಎಂಬುದೇ ಮರೆತು ಹೋಯಿತು. ಹೀಗಾಗಿ ಅವರು ‘ಓ ದೇವರೇ’ ಎಂದು ಮಾತ್ರ ಹೇಳಿ ನಗಲು ಪ್ರಾರಂಭಿಸಿದರು.
ವಾಸ್ತವವಾಗಿ ಹರ್ಷಿತ್ ತೋಮರ್ ಮತ್ತು ಕರಿಷ್ಮಾ ಕೊಟಕ್ ಯಾವುದೇ ರೀತಿಯ ಸಂಬಂಧದಲ್ಲಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಈಗ ಸ್ಪಷ್ಟವಾಗಿಲ್ಲ. ಆದರೆ ಪಂದ್ಯಾವಳಿ ಮುಗಿದ ನಂತರ, ತೋಮರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕರಿಷ್ಮಾ ಜೊತೆಗಿನ ಫೋಟೋವನ್ನು ಮಾತ್ರ ಪೋಸ್ಟ್ ಮಾಡಿದ್ದು, ಶೀರ್ಷಿಕೆಯಲ್ಲಿ ಕೆಂಪು ಹೃದಯದ ಎಮೋಜಿಯನ್ನು ಬಳಸಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಏನೋ ಇದೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

