ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳೋದು ನಮಗೆ ಸಂಬಂಧಿಸದ ವಿಷಯ, ಜನ ನಮ್ಮ ಪರವಾಗಿದ್ದಾರೆ: ಸಿದ್ದರಾಮಯ್ಯ
ಅವರು ಮೈತ್ರಿ ಮಾಡಿಕೊಳ್ಳುತ್ತಾರೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೋ ತಮಗೆ ಸಂಬಂಧಿಸದ ವಿಷಯ ಮತ್ತು ಕಾಂಗ್ರೆಸ್ ಅದರ ಬಗ್ಗೆ ಯೋಚಿಸುವ ಅಗತ್ಯವೂ ಇಲ್ಲ, ಎಂದು ಸಿದ್ದರಾಮಯ್ಯ ಹೇಳಿದರು. ನಾವು ಜನರ ಬಳಿಗೆ ಹೋಗಿ ಮತ ಯಾಚಿಸುತ್ತೇವೆ, ರಾಜ್ಯದ ಜನತೆ ನಮ್ಮ ಪರವಾಗಿದ್ದಾರೆ, ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಕೈ ಹಿಡಿದಂತೆ ಲೋಕ ಸಭಾ ಚುನಾವಣೆಯಲ್ಲೂ ಗೆಲ್ಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಲೋಕ ಸಭಾ ಚುನಾವಣೆಗಾಗಿ (Lok Sabha Polls) ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ 4 ಸೀಟುಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಎರಡು ಪಕ್ಷಗಳ ನಾಯಕರ ನಡುವೆ ಮಾತುಕತೆ ಶುರುವಾಗುತ್ತಿದ್ದಂತೆಯೇ ಕರ್ನಾಟಕದ ರಾಜಕೀಯ ವಲಯಗಳಲ್ಲಿ ಚರ್ಚೆಗಳು ಸಹ ಜೋರಾಗಿ ನಡೆಯುತ್ತಿವೆ. ಇದೇ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ಮಾತಾಡಿದಾಗ ಅವರು ತಮ್ಮ ಎಂದಿನ ಡೆವಿಲ್ ಮೇ ಕೇರ್ ಧಾಟಿಯಲ್ಲಿ (devil may care attitude) ಪ್ರತಿಕ್ರಿಯಿಸಿದರು. ಅವರು ಮೈತ್ರಿ ಮಾಡಿಕೊಳ್ಳುತ್ತಾರೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೋ ತಮಗೆ ಸಂಬಂಧಿಸದ ವಿಷಯ ಮತ್ತು ಕಾಂಗ್ರೆಸ್ ಅದರ ಬಗ್ಗೆ ಯೋಚಿಸುವ ಅಗತ್ಯವೂ ಇಲ್ಲ, ಎಂದು ಸಿದ್ದರಾಮಯ್ಯ ಹೇಳಿದರು. ನಾವು ಜನರ ಬಳಿಗೆ ಹೋಗಿ ಮತ ಯಾಚಿಸುತ್ತೇವೆ, ರಾಜ್ಯದ ಜನತೆ ನಮ್ಮ ಪರವಾಗಿದ್ದಾರೆ, ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಕೈ ಹಿಡಿದಂತೆ ಲೋಕ ಸಭಾ ಚುನಾವಣೆಯಲ್ಲೂ ಗೆಲ್ಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ