ನಮಗೆ ಸಿಐಡಿ ಮೇಲೆ ನಂಬಿಕೆ ಇಲ್ಲ, ನೇಹಾ ಹಿರೇಮಠ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಮಾಳವಿಕಾ ಅವಿನಾಶ್

|

Updated on: Apr 25, 2024 | 6:39 PM

ಕಾಲೇಜು ಆವರಣದಲ್ಲಿ ಒಬ್ಬ ಯುವತಿ ಬರ್ಬರ ಹತ್ಯೆಯಾಗುತ್ತದೆ ಅಂದರೆ ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ಎಷ್ಟರಮಟ್ಟಿಗೆ ರಕ್ಷಣೆ ಮತ್ತು ಸುರಕ್ಷತೆ ಇದೆ ಅನ್ನೋದು ಗೊತ್ತಾಗುತ್ತದೆ. ಕೊಲೆ ಕಳೆದ ಗುರುವಾರ ನಡೆದರೂ ರಾಜ್ಯದ ಮುಖ್ಯಮಂತ್ರಿಯವರು ನೇಹಾ ಪೋಷಕರೊಂದಿಗೆ ಮಂಗಳವಾರ ಮಾತಾಡುತ್ತಾರೆ. ಪಾಪ, ಚುನಾವಣೆಯಲ್ಲಿ ಬ್ಯೂಸಿಯಾಗಿರುವ ಅವರಿಗೆ ಪುರಸೊತ್ತು ಎಲ್ಲಿಂದ ಸಿಕ್ಕೀತು ಎಂದು ಮಾಳವಿಕಾ ಕುಹಕವಾಡಿದರು.

ಹುಬ್ಬಳ್ಳಿ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಳವಿಕಾ ಅವಿನಾಶ್ (Malavika Avinash) ಇಂದು ನೇಹಾ ಹಿರೇಮಠ (Neha Hiremath) ಅವರ ಮನೆಗೆ ತೆರಳಿ ಆಕೆಯ ತಂದೆತಾಯಿಗಳಿಗೆ ಸಾಂತ್ವನ ಹೇಳಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಒಂದು ಕಾಲೇಜು ಆವರಣದಲ್ಲಿ ಒಬ್ಬ ಯುವತಿ ಬರ್ಬರ ಹತ್ಯೆಯಾಗುತ್ತದೆ ಅಂದರೆ ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ಎಷ್ಟರಮಟ್ಟಿಗೆ ರಕ್ಷಣೆ ಮತ್ತು ಸುರಕ್ಷತೆ ಇದೆ ಅನ್ನೋದು ಗೊತ್ತಾಗುತ್ತದೆ. ಕೊಲೆ ಕಳೆದ ಗುರುವಾರ ನಡೆದರೂ ರಾಜ್ಯದ ಮುಖ್ಯಮಂತ್ರಿಯವರು ನೇಹಾ ಪೋಷಕರೊಂದಿಗೆ ಮಂಗಳವಾರ ಮಾತಾಡುತ್ತಾರೆ. ಪಾಪ, ಚುನಾವಣೆಯಲ್ಲಿ ಬ್ಯೂಸಿಯಾಗಿರುವ ಅವರಿಗೆ ಪುರಸೊತ್ತು ಎಲ್ಲಿಂದ ಸಿಕ್ಕೀತು ಎಂದು ಮಾಳವಿಕಾ ಕುಹಕವಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ನೇಹಾ ಮನೆಗೆ ಭೇಟಿ ನೀಡಿದ್ದಾಗ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಹೇಳಿದ್ದರು ಎಂದ ಮಾಳವಿಕಾ ಅವರು ಹೇಳಿದ ಹಾಗೆಯೇ ಸಿಬಿಐನಿಂದ ಪ್ರಕರಣದ ತನಿಖೆಯಾಗಬೇಕು, ಯಾಕೆಂದರೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿ ಮೇಲೆ ತಮಗೆ ನಂಬಿಕೆ ಇಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನೇಹಾ ಹಿರೇಮಠ ಹತ್ಯೆಯಂಥ ಘೋರ ಕೃತ್ಯ ನಡೆದರೆ ಕೈಕಟ್ಟಿ ಮನೇಲಿ ಕೂರಲಾಗುತ್ತಾ? ಬಿವೈ ವಿಜಯೇಂದ್ರ

Follow us on