ಪೆಟ್ರೋಲ್ ರೂ. 250/ಲೀ, ಹಾಲು ರೂ. 300/ಲೀ ಮಾರಾಟವಾಗುತ್ತಿರುವ ಪಾಕಿಸ್ತಾನದ ಜೊತೆ ಭಾರತವನ್ನು ರಮ್ಯಾ ಯಾಕೆ ಹೋಲಿಸಿದರೋ? ಸಿಟಿ ರವಿ
ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಭಾರತದಲ್ಲಿ ಹಣದುಬ್ಬರ ಪ್ರಮಾಣ ಶೇಕಡ 9 ರಷ್ಟಿತ್ತು ಈಗ ಅದು ಕೇವಲ ಶೇಕಡ 4ರಷ್ಟಿದೆ, ಎಂದು ರವಿ ಹೇಳಿದರು.
ಚಿಕ್ಕಮಗಳೂರು: ಕಾಂಗ್ರೆಸ್ ಕಾರ್ಯಕರ್ತೆ ಮತ್ತು ಚಿತ್ರನಟಿ ರಮ್ಯಾ (Ramya) ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಕೇಂದ್ರ ಬಜೆಟ್ ಮಂಡನೆ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ ಟಿವಿ9 ಜಿಲ್ಲಾ ವರದಿಗಾರನೊಂದಿಗೆ ಮಾತಾಡಿದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಶಾಸಕ ಸಿಟಿ ರವಿ (CT Ravi) ಅವರು, ಅದ್ಯಾವ ಕಾರಣಕ್ಕೆ ರಮ್ಯಾ ಅವರು ನಮ್ಮ ದೇಶವನ್ನು ಪಾಕಿಸ್ತಾನಕ್ಕೆ (Pakistan) ಹೋಲಿಸಿದರೋ ಅರ್ಥವಾಗುತ್ತಿಲ್ಲ, ನೆರೆ ದೇಶದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ರೂ. 250, ಹಾಲು ಪ್ರತಿಲೀಟರ್ ಗೆ ರೂ. 300 ರಂತೆ ಮಾರಾಟವಾಗುತ್ತಿವೆ. ಪಾಕಿಸ್ತಾನ, ಶ್ರೀಲಂಕಾ, ಚೀನಾ, ಅಮೆರಿಕ ಮೊದಲಾದ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹಣದುಬ್ಬರ ಪ್ರಮಾಣ ಕಡಿಮೆ ಇದೆ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಭಾರತದಲ್ಲಿ ಹಣದುಬ್ಬರ ಪ್ರಮಾಣ ಶೇಕಡ 9 ರಷ್ಟಿತ್ತು ಈಗ ಅದು ಕೇವಲ ಶೇಕಡ 4ರಷ್ಟಿದೆ, ಎಂದು ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ