Loading video

ನಾವು ಎಂಕೆ ಸ್ಟಾಲಿನ್ ಜೊತೆ ಮಾತಾಡಿಯಾಗಿದೆ, ಕೇಂದ್ರ ಸರ್ಕಾರವೇ ನಮ್ಮನ್ನು ಕರೆಸಿ ಮಾತಾಡಲಿ: ಡಿಕೆ ಶಿವಕುಮಾರ್, ಡಿಸಿಎಂ

Updated on: Sep 15, 2023 | 6:02 PM

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಸಚಿವ ಕೆಎನ್ ರಾಜಣ್ಣ ಪಕ್ಷದ ಹೈಕಮಾಂಡ್ ಗೆ ಬರೆದಿರುವುದಕ್ಕೆ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ ಶಿವಕುಮಾರ್ ಉತ್ತರಿಸುವ ಗೋಜಿಗೂ ಹೋಗದೆ ಅಲ್ಲಿಂದ ಹೊರಟರು.

ಬೆಂಗಳೂರು: ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಮಂತ್ರಿಗಳು ಬೆಂಗಳೂರು-ದೆಹಲಿ ಅಂತ ಓಡಾಡುವ ಬದಲು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೆ (MK Stalin) ಪತ್ರ ಬರೆದು ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಅಂತ ಬಿಜೆಪಿ ನಾಯಕರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ತಮ್ಮ ಸರ್ಕಾರ ಆ ಪ್ರಯತ್ನವನ್ನೂ ಮಾಡಿದೆ ಆದರೆ ಎಲ್ಲರಿಗೂ ತಮ್ಮ ರಾಜ್ಯಗಳ ಹಿತರಕ್ಷಣೆ ಕಾಯುವುದು ಮುಖ್ಯವಾಗುತ್ತದೆ. ಮೇಲೆ ಕೂತಿರುವ ಕೇಂದ್ರ ಸರ್ಕಾರಕ್ಕೆ (Union Government) ವಾಸ್ತವಾಂಶದ ಅರಿವಿದೆ. ಅವರು ಎರಡೂ ರಾಜ್ಯಗಳ ನಾಯಕರನ್ನು ಕರೆಸಿ ಮಾತಾಡಿ ಸಮಸ್ಯೆ ಬಗೆಹರಿಸಲಿ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಸಚಿವ ಕೆಎನ್ ರಾಜಣ್ಣ (KN Rajanna) ಪಕ್ಷದ ಹೈಕಮಾಂಡ್ ಗೆ ಬರೆದಿರುವುದಕ್ಕೆ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ ಶಿವಕುಮಾರ್ ಉತ್ತರಿಸುವ ಗೋಜಿಗೂ ಹೋಗದೆ ಅಲ್ಲಿಂದ ಹೊರಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ