Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಪರ ಭರ್ಜರಿ ಬ್ಯಾಟ್ ಬೀಸಿದ ಪ್ರಮೋದ್​ ಮುತಾಲಿಕ್, ಹಿಂದೂ ಕಾರ್ಯಕರ್ತೆ ನಿರ್ದೋಷಿಯಾಗಿ ಬರ್ತಾರೆ ಎಂದರು!

ಚೈತ್ರಾ ಕುಂದಾಪುರ ಪರ ಭರ್ಜರಿ ಬ್ಯಾಟ್ ಬೀಸಿದ ಪ್ರಮೋದ್​ ಮುತಾಲಿಕ್, ಹಿಂದೂ ಕಾರ್ಯಕರ್ತೆ ನಿರ್ದೋಷಿಯಾಗಿ ಬರ್ತಾರೆ ಎಂದರು!

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಸಾಧು ಶ್ರೀನಾಥ್​

Updated on:Sep 15, 2023 | 5:52 PM

MLA ticket cheating case: ನಾಲ್ಕು ತಿಂಗಳ ಹಿಂದೆ ನಡೆದ ರಾಜ್ಯ ಅಸೆಂಬ್ಲಿ ಚುನಾವಣೆಗಾಗಿ ಬಿಜೆಪಿ ವತಿಯಿಂದ ಟಿಕೆಟ್​ ಕೊಡಿಸ್ತೀನಿ ಎಂದು ಕೋಟ್ಯಂತರ ರೂಪಾಯಿ ಉಂಡೆನಾಮ ತಿಕ್ಕಿರುವ ಆರೋಪದಲ್ಲಿ ಜೈಲುಪಾಲಾಗಿರುವ ಹಿಂದೂ ಕಾರ್ಯಕರ್ತೆ ಮಿಸ್​​ ಚೈತ್ರಾ ಕುಂದಾಪುರ ಪರ ಪ್ರಮೋದ್ ಮುತಾಲಿಕ್ ಭರ್ಜರಿ ಬ್ಯಾಟ್ ಬೀಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ನಡೆದ ರಾಜ್ಯ ಅಸೆಂಬ್ಲಿ ಚುನಾವಣೆಗಾಗಿ ಬಿಜೆಪಿ ವತಿಯಿಂದ ಟಿಕೆಟ್​ ಕೊಡಿಸ್ತೀನಿ (MLA ticket cheating case) ಎಂದು ಕೋಟ್ಯಂತರ ರೂಪಾಯಿ ಉಂಡೆನಾಮ ತಿಕ್ಕಿರುವ ಆರೋಪದಲ್ಲಿ ಜೈಲುಪಾಲಾಗಿರುವ ಹಿಂದೂ ಕಾರ್ಯಕರ್ತೆ ಮಿಸ್​​ ಚೈತ್ರಾ ಕುಂದಾಪುರ ( Chaitra Kundapura) ಪರ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Sri Ram Sena chief Pramod Muthalik ) ಅವರು ಭರ್ಜರಿ ಬ್ಯಾಟ್ ಬೀಸಿದ್ದಾರೆ. ಹುಬ್ಬಳ್ಳಿಯಲ್ಲಿ ಟಿವಿ9 ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು ಚೈತ್ರಾ ಕುಂದಾಪುರ ನಿರ್ದೋಷಿಯಾಗಿ ಬರ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಹಿಂದೂ ಕಾರ್ಯಕರ್ತರಿಗೆ ತೊಂದರೆ ಕೊಡೋ ‌ಕೆಲಸ ಆಗ್ತಿದೆ. ಚಕ್ರವರ್ತಿ ಸೂಲಿಬೆಲೆ ಇರಬಹುದು, ಪುನೀತ್ ಕೆರೆಹಳ್ಳಿ ಇರಬಹುದು, ಪ್ರಮೋದ್ ಮುತಾಲಿಕ್ ಇರಬಹುದು. ಯಾವದಾದರೂ ನೆಪ ಮಾಡಿ ಜೈಲಿಗೆ ಹಾಕೋ ಕೆಲಸ ಆಗ್ತಿದೆ. ಇದೀಗ ಅದೇ ಮಾದರಿಯಲ್ಲಿ ಚೈತ್ರಾ ಕುಂದಾಪುರ ಅಂದರ್​ ಆಗಿದ್ದಾರೆ. ಅವರನ್ನು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಸಿಗಿಸಿ ಹಾಕೋ ಕೆಲಸ ಆಗ್ತಿದೆ‌‌. ಅದರೂ ಸಂಪೂರ್ಣ ತನಿಖೆಯಾಗಬೇಕು. ತನಿಖೆಯ ಮೂಲಕ ಯಾರೂ ತಪ್ಪಿತಸ್ಥರು ಅಂತಾ ಗೊತ್ತಾಗಲಿದೆ. ಚೈತ್ರಾ ಅವರು ಹೊರಗೆ ಬರಬೇಕೆಂದು ಮುತಾಲಿಕ್ ಆಗ್ರಹ ಮಾಡಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Sep 15, 2023 05:47 PM