AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Karnataka Summit 2023; ಟ್ರಾಫಿಕ್ ಸಮಸ್ಯೆಯಿಂದ ಶಾಲಾಮಕ್ಕಳಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಉಪಾಯ ಕಂಡುಕೊಳ್ಳಬೇಕು: ಡಿಕೆ ಶಿವಕುಮಾರ್

TV9 Karnataka Summit 2023; ಟ್ರಾಫಿಕ್ ಸಮಸ್ಯೆಯಿಂದ ಶಾಲಾಮಕ್ಕಳಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಉಪಾಯ ಕಂಡುಕೊಳ್ಳಬೇಕು: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 15, 2023 | 4:19 PM

Share

ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023: ಶಾಲಾ ವೇಳೆಯನ್ನು ಬದಲಾಯಿಸುವುದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಬೆಳಗ್ಗೆ 7 ಗಂಟೆಗೆ ಇಲ್ಲವೇ 10:30ಕ್ಕೆ ಶಾಲೆಗಳನ್ನು ಅರಂಭಿಸಲಾಗದು. ಒಂದು ಪರಿಹಾರವಂತೂ ಬೇಕೇಬೇಕು ಅಂತ ಹೇಳಿದ ಶಶಿಕುಮಾರ್ ಸರ್ಕಾರದ ಕಡೆಯಿಂದ ಶಾಲಾ ಮುಖ್ಯಸ್ಥರನ್ನು, ಪೋಷಕನ್ನು ಮತ್ತು ಸಂಬಂಧಪಟ್ಟ ಉಳಿದವರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುವ ಯೋಚನೆ ಏನಾದರೂ ಇದೆಯಾ ಅಂತ ಉಪ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

ಬೆಂಗಳೂರು: ಕನಸಿನ ಕರುನಾಡು ಕರ್ನಾಟಕ ಸ್ಟೇಟ್ ಸಮ್ಮಿಟ್-2023 (TV9 Karnataka Summit 2023) ರಲ್ಲಿ ಭಾಗವಹಿಸಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಗರದಲ್ಲಿ ಪ್ರತಿನಿತ್ಯ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗ ಕಳವಳ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿರುವ ಸಂಗತಿಯನ್ನು ಅವರು ಅಂಗೀಕರಿಸಿದರು. ಖಾಸಗಿ ಶಾಲೆಯೊಂದರ ಮುಖ್ಯಸ್ಥರಾಗಿರುವ ಶಶಿಕುಮಾರ್ (Shashi Kumar), ನ್ಯಾಯಾಲಯ ಸಹ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಶಾಲಾ ವೇಳೆಯನ್ನು ಬದಲಾಯಿಸುವುದರಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಬಹುದೇ ಅಂತ ಪೋಷಕರ, ಶಾಲೆಗಳ ಮುಖ್ಯಸ್ಥರ ಅಭಿಪ್ರಾಯ ಸಂಗ್ರಹಿಸುವುದು ಒಳ್ಳೆಯದು ಅಂತ ಹೇಳಿದೆ. ಆದರೆ, ಶಾಲಾ ವೇಳೆಯನ್ನು ಬದಲಾಯಿಸುವುದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಬೆಳಗ್ಗೆ 7 ಗಂಟೆಗೆ ಇಲ್ಲವೇ 10:30ಕ್ಕೆ ಶಾಲೆಗಳನ್ನು ಅರಂಭಿಸಲಾಗದು. ಒಂದು ಪರಿಹಾರವಂತೂ ಬೇಕೇಬೇಕು ಅಂತ ಹೇಳಿದ ಶಶಿಕುಮಾರ್ ಸರ್ಕಾರದ ಕಡೆಯಿಂದ ಶಾಲಾ ಮುಖ್ಯಸ್ಥರನ್ನು, ಪೋಷಕರನ್ನು ಮತ್ತು ಸಂಬಂಧಪಟ್ಟ ಉಳಿದವರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುವ ಯೋಚನೆ ಏನಾದರೂ ಇದೆಯಾ ಅಂತ ಉಪ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಅವರ ಸಲಹೆಯನ್ನು ಸ್ವಾಗತಿಸಿದ ಶಿವಕುಮಾರ್ ಶಿಕ್ಷಣ ಸಚಿವ ಮತ್ತು ತಾವು ವಿಷಯ ಚರ್ಚಿಸಿ ಸಂಬಂಧಪಟ್ಟವರನ್ನೆಲ್ಲ ಕರೆಸಿ ಮಾತಾಡುವುದಾಗಿ ಹೇಳಿದರು. ಶಾಲಾ ವೇಳೆ ಬದಲಾಯಿಸುವದು ಸಾಧ್ಯವಿಲ್ಲ, ಯಾವುದಾದರೂ ಪರ್ಯಾಯ ವ್ಯವಸ್ಥೆ ಯೋಚಿಸಬೇಕು ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ