DK Shivakumar Speech: ಟ್ರಾಫಿಕ್, ಕಸ ಸಮಸ್ಯೆ ಸೇರಿದಂತೆ ಬ್ರ್ಯಾಂಡ್​ ಬೆಂಗಳೂರು ಕಟ್ಟುವ ಬಗ್ಗೆ​ ಡಿಕೆ ಶಿವಕುಮಾರ್ ಮನದಾಳದ ಮಾತು​

ಕನಸಿನ ಕರುನಾಡು ಟಿವಿ9 ಸಮ್ಮಿಟ್​ 2023: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕನಸಿನ ಕರುನಾಡು ಟಿವಿ9 ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಈ ವೇಳೆ ಬೆಂಗಳೂರು ಕಟ್ಟಲು 4 ಮಾಸ್ಟರ್​ ಪ್ಲ್ಯಾನ್​ಗಳ ಬಗ್ಗೆ ಮಹತ್ವದ ಅಂಶಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್, ಬ್ರ್ಯಾಂಡ್ ಬೆಂಗಳೂರು, ಬೆಂಗಳೂರು ನಗರ ಅಭಿವೃದ್ಧಿ ಸೇರಿದಂತೆ ಕೊನೆಗೆ ಆಪರೇಷನ್​ ಹಸ್ತದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು ಅದು ಈ ಕೆಳಗಿನಂತಿದೆ.

DK Shivakumar Speech: ಟ್ರಾಫಿಕ್, ಕಸ ಸಮಸ್ಯೆ ಸೇರಿದಂತೆ ಬ್ರ್ಯಾಂಡ್​ ಬೆಂಗಳೂರು ಕಟ್ಟುವ ಬಗ್ಗೆ​ ಡಿಕೆ ಶಿವಕುಮಾರ್ ಮನದಾಳದ ಮಾತು​
ಡಿಕೆ ಶಿವಕುಮಾರ್
Follow us
| Updated By: ರಮೇಶ್ ಬಿ. ಜವಳಗೇರಾ

Updated on:Sep 15, 2023 | 2:20 PM

ಬೆಂಗಳೂರು, (ಸೆಪ್ಟೆಂಬರ್ 15): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದ್ದು, ಈ ದಿನಗಳಲ್ಲಿ ಸರ್ಕಾರ ಯಾವೆಲ್ಲ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದೆ ಜನರಿಗಾಗಿ , ರಾಜ್ಯ ಅಭಿವೃದ್ಧಿಗಾಗಿ ಏನೆಲ್ಲಾ ಕಾರ್ಯಕ್ರಮಗಳನ್ನು ನೀಡಲಿದೆ ಎನ್ನುವ ಬಗ್ಗೆ ಚರ್ಚಿಸಲು ನಿಮ್ಮ ಟಿವಿ9 ಕನ್ನಡ ಕನಸಿನ ಕರುನಾಡು”(TV9 Karnataka Summit 2023)  ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗವಹಿಸಿ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪ್ರಶ್ನೆ: ಜಾಗತಿಕ ನಗರ ಬೆಂಗಳೂರನ್ನು ಬ್ರ್ಯಾಂಡ್​ ಬೆಂಗಳೂರು ಹೇಗೆ ಮಾಡುತ್ತೀರಿ?

ಡಿಕೆ ಶಿವಕುಮಾರ್​: ಬೆಂಗಳೂರು ದೇಶದ ಆಸ್ತಿ. ವಿದೇಶಿಗರು ಬೆಂಗಳೂರ ಮುಖಾಂತರ ಭಾರತವನ್ನು ನೋಡುತ್ತಾರೆ. ಅಟಲ್​ ಬಿಹಾರಿ​ ವಾಜಪೇಯಿ ಅವರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದರು. ವಿದೇಶ ನಾಯಕರು ಮೊದಲು ಬೆಂಗಳೂರಿಗೆ ಬರುತ್ತಿದ್ದಾರೆ. ಜಗತ್ತು ಬೆಂಗಳೂರನ್ನು ನೋಡುತ್ತಿದ್ದಾರೆ. ಬೆಂಗಳೂರನ್ನು ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ ಎಂದರು.

ಇದನ್ನೂ ಓದಿ: TV9 Karnataka Summit 2023 Live: ಕನಸಿನ ಕರುನಾಡು ಕಾರ್ಯಕ್ರಮದಲ್ಲಿ ಕೆಜೆ ಜಾರ್ಜ್​ ಸಂದರ್ಶನ

ಪ್ರಶ್ನೆ: ಬೆಂಗಳೂರು ಕಟ್ಟುವ ಕಾರ್ಯ ಮುಂದುವರೆಯುತ್ತಿದೆಯಾ?

ಡಿಕೆ ಶಿವಕುಮಾರ್​: ಬದಲಾವಣೆ ಮಾಡಲು ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಬೆಂಗಳೂರನ್ನು ಪ್ಲಾನ್​ ಮಾಡಿ ಆಗಿ ಕಟ್ಟಿಲ್ಲ. ಒಂದೇ ದಿನದಲ್ಲಿ ಬೆಂಗಳೂರು ಕಟ್ಟಲು ಆಗಲ್ಲ. 70 ಸಾವಿರ ಜನರು ಅಭಿಪ್ರಾಯ ನೀಡಿದ್ದಾರೆ. 1. ನಗರದಲ್ಲಿರುವ ಕಸದ ಸಮಸ್ಯೆ ನಿವಾರಣೆ ಮಾಡಬೇಕು. 2. ಟ್ರಾಫಿಕ್​ ಮುಕ್ತವಾಗಿಸಲು ಯೋಜನೆ ರೂಪಿಸುತ್ತಿದ್ದೇವೆ 3. ತೆರೆಗೆದಾರರಿಗೆ ಉತ್ತಮ ಮೂಲಭೂತ ಸೌಕರ್ಯ ನೀಡಬೇಕು. 4. ಹೊರಗಡೆಯಿಂದ ಬರುವ ಜನರನ್ನು ತಡೆಯಬೇಕು. ಈ ಮೂಲಕ ಬೆಂಗಳೂರಿನ ಒತ್ತಡ ತಡೆಯಬೇಕು ಎಂದು ತಿಳಿಸಿದರು.

ಟ್ರಾಫಿಕ್ ಸಮಸ್ಯೆಗೆ ಪೆರಿಫೆರಲ್ ರಿಂಗ್ ರಸ್ತೆ ಪರಿಹಾರವಾಗಲಿದೆ ಎಂದ ಡಿಕೆಶಿ

ಡಿಕೆ ಶಿವಕುಮಾರ್​: ಟ್ರಾಫಿಕ್ ಸಮಸ್ಯೆಗೆ ಪೆರಿಫೆರಲ್ ರಿಂಗ್ ರಸ್ತೆ ಪರಿಹಾರವಾಗಲಿದೆ. ಫ್ಲೈಓವರ್, ಸುರಂಗ ರಸ್ತೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತೆ. ಬೆಂಗಳೂರಿನ ಪ್ರತಿ ವಾರ್ಡ್​ಗೆ ಯುವ ಐಎಎಸ್ ಅಧಿಕಾರಿಗಳ ನೇಮಕ ಮಾಡುತ್ತೇವೆ. ಬೆಂಗಳೂರಿಗರ ಆಸ್ತಿ ಮೌಲ್ಯದ ಬಗ್ಗೆ ಇ-ಸ್ವತ್ತು ಮಾಡಿಸುತ್ತೇವೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಇ-ಸ್ವತ್ತು ದಾಖಲೆ ತಲುಪಿಸುತ್ತೇವೆ. ಸರ್ಕಾರಕ್ಕೆ ತೆರಿಗೆ ಕಟ್ಟುವವರಿಗೆ ನಾವು ಸೌಲಭ್ಯ ಕಲ್ಪಿಸಬೇಕಾಗಿದೆ. ಆಸ್ತಿ ಮೌಲ್ಯಮಾಪನ ಮಾಡಿಸಿದರೆ ತೆರಿಗೆ ವಂಚಕರು ಗೊತ್ತಾಗುತ್ತೆ. ಎತ್ತಿನಹೊಳೆ ಯೋಜನೆ ಮೂಲಕ ತಿಪ್ಪಗೊಂಡನಹಳ್ಳಿಗೆ ನೀರು ತರುತ್ತೇವೆ. ತಿಪ್ಪಗೊಂಡನಹಳ್ಳಿ ತಲುಪಿದ ನಂತರ ಮುಂದಿನ ಯೋಜನೆಗೆ ನಿರ್ಧಾರ ಎಂದರು.

ಇದನ್ನೂ ಓದಿ: Siddaramaiah Speech: ಗ್ಯಾರಂಟಿ ಯೋಜನೆಗಳನ್ನು ದೇಶಕ್ಕೆ ತಿಳಿಸುವ ಕೆಲಸ ಮಾಡಲಾಗುತ್ತಿದೆ: ಸಿದ್ದರಾಮಯ್ಯ

ಟ್ರಾಫಿಕ್​ನಿಂದ ವರ್ಷಕ್ಕೆ 20 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದಕ್ಕೆ ಪರಿಹಾರ?  

ಡಿಕೆ ಶಿವಕುಮಾರ್​: ನೈಸ್​​ ರಸ್ತೆ ಆಗಬಾರದೆಂದು ತಡೆದಿದ್ದಾರೆ. ಸ್ವಾರ್ಥ ರಾಜಕಾರಣಕ್ಕಾಗಿ ತಡೆದಿದ್ದಾರೆ. ರಿಂಗ್​ ರೋಡ್​ ತರಲು 26 ಸಾವಿರ ಕೋಟಿ ರೂ. ಬೇಕು. ಟ್ರಾಫಿಕ್​ ನಿವಾರಣೆಗೆ ಹಲವು ಯೋಜನೆಗಳನ್ನು ರೂಪಿಸಿದ್ದೇನೆ. ಜಾರಿಗೆ ತರುತ್ತೇನೆ. ಇನ್ನು ಕಸ ವಿಲೇವಾರಿಗೆ ಶಾಶ್ವತ ಮುಕ್ತಿ ಕೊಡಲು ಯೋಜನೆ ರೂಪಿಸುತ್ತಿದ್ದೇನೆ. ಈ ಸಂಬಂಧ ನಾನು ಹೈದರಾಬಾದ್​ ಹೋಗುತ್ತೀದ್ದೇನೆ. ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ಕೊನೆಯದಾಗಿ ಆಪರೇಷನ್​​ ಹಸ್ತದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಡಿಕೆ ಶಿವಕುಮಾರ್​:  ಡಿಕೆ ಶಿವಕುಮಾರ್​: ನಮ್ಮ ಪಕ್ಷಕ್ಕೆ ಬರುವವರ ದೊಡ್ಡ ಪಟ್ಟಿ ಇದೆ. ಮುಂದಿನ ದಿನಗಳಲ್ಲಿ ಇನ್ನ ಅನೇಕರು ಬರುತ್ತಾರೆ. ಅವರು ಬಯಸಿ ಬರುತ್ತಿದ್ದಾರೆ. ಜೆಡಿಎಸ್​-ಬಿಜೆಪಿ ಮೈತ್ರಿ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಲೋಕಸಭಾ ಚುನಾವಣೆ ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಮುಹೂರ್ತ ನೋಡಿ ಹೇಳುತ್ತೇನೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Fri, 15 September 23

ತಾಜಾ ಸುದ್ದಿ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ